ಹಾವೇರಿ: ಶಿವಮೊಗ್ಗದ ಹಿಂದೂ ಹುಲಿ ಹರ್ಷನ ಕುಟುಂಬವು ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಆಗಮಿಸಿದ್ದರು. ಈ ವೇಳೆ ಹರ್ಷನನ್ನೆ ನೋಡಿದಷ್ಟು ಸಂತೋಷವಾಯಿತು ಎಂದು ಸಂತೋಷ ವ್ಯಕ್ತಪಡಿಸಿದರು.
Advertisement
2021 ಡಿಸೆಂಬರ್ 4 ರಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ(ರಿ) ರಾಣೇಬೆನ್ನೂರ ಇವರ ವತಿಯಿಂದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಂದು ಹೋರಿಯನ್ನು ಸುಮಾರು 9 ಲಕ್ಷ ರೂ.ಗೆ ತಂದು ಅದಕ್ಕೆ ರಾಣೇಬೆನ್ನೂರ ಕಾ ರಾಜಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದನ್ನು ಕೊಬರಿ ಹೊರಿ ಹಬ್ಬದ ಅಖಾಡಕ್ಕೆ ಬಿಡಲಾಗಿತ್ತು. ಈ ಹೋರಿ ಮೂರು ನಾಲ್ಕು ಹಬ್ಬಗಳನ್ನು ಮಾಡಿದರು ಅಷ್ಟೇನೂ ಹೆಸರು ಮಾಡಿರಲಿಲ್ಲ. ಆದರೆ ಶಿವಮೊಗ್ಗದ ಹಿಂದೂ ಹುಲಿ ಹರ್ಷನ ಸವಿನೆನಪು ಎಂದು ಅಖಾಡಕ್ಕೆ ಬಿಡಲಾಯಿತು. ನಂತರ ನೆಡೆದಿದ್ದೆಲ್ಲವು ಇತಿಹಾಸ. ಇದನ್ನೂ ಓದಿ: ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣ: ಸಿಎಂ
Advertisement
Advertisement
ಹಿಂದೂ ಹುಲಿ ಹರ್ಷನ ಸವಿನೆನಪಿಗಾಗಿ ರಾಣೇಬೆನ್ನೂರ ಕಾ ರಾಜಾ(ಈ ಹೆಸರನ್ನಾ ಕೂಗಿದ ತಕ್ಷಣ ಇಡೀ ಕೊಬರಿ ಹೊರಿ ಹಬ್ಬದ ಅಖಾಡಕ್ಕೆ ಅಖಾಡವೇ ಕೇ ಕೀ ಹೊಡೆದು ಕುಣಿದು ಕುಪ್ಪಳಿಸುತ್ತದೆ) ಎಂದು ನಾಮಕರಣ ಮಾಡಿ ಬಿಟ್ಟ ಮೊದಲ ಹಬ್ಬದಲ್ಲೇ ಬಂಗಾರದ ಉಂಗುರವನ್ನು ಬಹುಮಾನವಾಗಿ ಪಡೆಯಿತು.
Advertisement
ಹೀಗೆ ಇಲ್ಲಿಯವರೆಗೆ ಒಂದು ಬೈಕ್, 3 ಬಂಗಾರದ ಉಂಗುರ, ಒಂದು ಬಂಗಾರ ಲಾಕೆಟ್, ಒಂದು ಎತ್ತಿನ ಚಕ್ಕಡಿ, ಗಾಡ್ರೇಜ್ ಹಾಗೂ ಇನ್ನೂ ಸಣ್ಣ ಪುಟ್ಟ ಬಹುಮಾನವನ್ನು ಪಡೆದಿದೆ. ಇಷ್ಟೇಲ್ಲ ಹೆಸರು ಮಾಡಿದ ಹಿಂದೂ ಹುಲಿ ಹರ್ಷನ ಸವಿನೆನಪಿಗಾಗಿ ರಾಣೇಬೆನ್ನೂರ ‘ಕಾ ರಾಜಾ’ ಹೋರಿಯ ಬಗ್ಗೆ ಹರ್ಷನ ಕುಟುಂಬಕ್ಕೆ ಸುದ್ದಿ ಮುಟ್ಟಿದೆ. ಪರಿಣಾಮ ರಾಣೇಬೆನ್ನೂರಿನ ಕುರುಬಗೇರಿಯ ಬುರಡಿಕಟ್ಟಿಯವರ ಕಣಕ್ಕೆ ಹರ್ಷನ ತಾಯಿ, ಅಕ್ಕ, ತಂಗಿ, ಸಹೋದರರು, ಸಂಬಂಧಿಕರು ಹಾಗೂ ಸ್ನೇಹಿತರು ಭೇಟಿ ನೀಡಿ ಹೋರಿಯನ್ನು ನೋಡಿ ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
ತಮ್ಮ ಮನಸ್ಸಿನ ಭವನೆಗಳನ್ನ ಹಂಚಿಕೊಂಡು, ಖುಷಿಯ ಕಣ್ಣಿರು ಹಾಕಿದ್ದಾರೆ. ಹರ್ಷನನ್ನು ನಾವು ಇಂದು ಜೀವಂತವಾಗಿ ನೊಡಿದಂತಾಯಿತು ಎಂದು ಹೇಳಿ, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ (ರಿ) ರಾಣೇಬೆನ್ನೂರ ಹಾಗೂ ರಾಣೇಬೆನ್ನೂರ ಕಾ ರಾಜಾ ಮಹಾಗಣಪತಿಯ ತಂಡಕ್ಕೂ ಕೃತಘ್ನತೆ ತಿಳಿಸಿ. ಕೆಲ ಸಮಯ ಹೋರಿಯು ಜೊತೆಗೆ ಸಮಯ ಕಳೆದು ಶಿವಮೊಗ್ಗಕ್ಕೆ ಮರಳಿದರು.