ಉಡುಪಿ: ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಅಭಿಯಾನ ಶುರು ಮಾಡಿದೆ. ಉಡುಪಿಯಲ್ಲಿ ಎಲ್ಲಾ ಕಾಲೇಜುಗಳ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿದ್ದಾರೆ.
ಇವತ್ತು ನಗರದ ಎಂಜಿಎಂ ಕಾಲೇಜು ಮುಂಭಾಗದಲ್ಲಿ ಹಿಂದೂಪರ ಸಂಘಟನೆಗಳು ಜಮಾಯಿಸಿದ್ದರು. ಲವ್ ಜಿಹಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ ಕಾಲೇಜು ಬಿಡುವ ವೇಳೆ ಲವ್ ಜಿಹಾದ್ ಕುರಿತಾದ ಮಾಹಿತಿಯಿರುವ ಕರಪತ್ರ ಹಂಚಿದರು.
Advertisement
ಜಿಲ್ಲೆಯಾದ್ಯಂತ ಸಂಘಟನೆಗಳು ಮಾಹಿತಿ-ಜಾಗೃತಿ ಅಭಿಯಾನ ಶುರು ಮಾಡಿವೆ. ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಮಾಡಿದ್ದು ಅದನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ಸಂಘಟನೆ ಹೇಳಿದೆ. ದುರ್ಗಾವಾಹಿನಿ ಸಂಘಟನೆ ಮಹಿಳೆಯರು, ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ರು. ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಯ ಸದಸ್ಯೆಯರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವುದಾಗಿ ಹೇಳಿದರು. ಪೋಷಕರು ಕೂಡಾ ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದು ಕರೆ ನೀಡಿದರು.
Advertisement
Advertisement
ವಿ.ಹಿಂ.ಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ಲವ್ ಜಿಹಾದ್ ಮೀನಿಂಗ್ ಲೆಸ್ ಅಂತ ಕೆಲ ಬುದ್ಧಿಜೀವಿಗಳು ಹೇಳಿಕೆ ಕೊಡುತ್ತಾರೆ. ಆದ್ರೆ ಲವ್ ಜಿಹಾದ್ ಇದೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ದೇಶವನ್ನು ಇಸ್ಲಾಮೀಕರಣ ಮಾಡಲು ಜಿಹಾದಿಗಳು ಹೊರಟಿದ್ದಾರೆ. ಎಂಜಿಎಂ ಕಾಲೇಜು ಬಳಿ ಮಾಹಿತಿ ನೀಡುವ ಅಭಿಯಾನ ಮಾಡಿದ್ದೇವೆ. ಜಿಲ್ಲೆಯಾದ್ಯಂತ ಮಾಡ್ತೇವೆ. ಪ್ರೀತಿಗೆ ವಿರುದ್ಧ ಅಲ್ಲ. ಪ್ರೀತಿಯ ಹೆಸರಲ್ಲಿ ಷಡ್ಯಂತ್ರ ನಡೆದರೆ ಬಿಡಲ್ಲ. ಫೇಸ್ ಬುಕ್, ವಾಟ್ಸಪ್ ನ ಡೂಪ್ಲಿಕೇಟ್ ಪ್ರೊಫೈಲ್ ವಿರುದ್ಧ ಪೊಲೀಸರಿಗೆ ಮನವಿ ಕೊಟ್ಟಿದ್ದೇವೆ. ಹಿಂದೂ ಹುಡುಗಿಯರನ್ನು ಪಟಾಯಿಸಲೆಂದೇ ಕೆಲ ಮುಸಲ್ಮಾನ ಯುವಕರ ಗುಂಪು ಇದೆ. ಆ ಜಾಲದ ಬಗ್ಗೆ ಪೊಲೀಸರು ತನಿಖೆ ಮಾಡಬೇಕು ಎಂದು ಹೇಳಿದರು.
Advertisement
ಅಮಾಯಕ ತರುಣಿಯರನ್ನು ಮುಸಲ್ಮಾನರು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಲವ್ ಜಿಹಾದ್ ವಿರುದ್ಧ ರಾಷ್ಟ್ರದಾದ್ಯಂತ ಆಂದೋಲನ ಶುರುವಾಗಿದೆ. ಕರ್ನಾಟಕದ ಕರಾವಳಿಯಲ್ಲೂ ಈ ಅಭಿಯಾನ ಶುರುಮಾಡಿದ್ದೇವೆ. ತಂದೆ ತಾಯಿ ಎಷ್ಟು ನಿಗಾ ವಹಿಸಿದರೂ ಕಾಲೇಜಿನಲ್ಲಿ ನಡೆಯುವ ಚಟುವಟಿಕೆ ಹೆತ್ತವರಿಗೆ ಗೊತ್ತಾಗುವುದಿಲ್ಲ. ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಈ ಅಭಿಯಾನ ನಮ್ಮ ಪ್ರಯತ್ನ. ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದನ್ನೂ ತಿಳಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷೆ ಸುಪ್ರಭ ಆಚಾರ್ಯ ಹೇಳಿದರು. ಪ್ರಾಂತ ಮಟ್ಟದಲ್ಲಿ ಈ ಬಗ್ಗೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಭಿಯಾನ ಶುರುಮಾಡಿದ್ದೇವೆ ಎಂದರು.