ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ದೇವಸ್ಥಾನ, ಸರ್ಕಾರಿ ಶಾಲೆ ಬಳಿಕ ಇದೀಗ ಹಿಂದೂಗಳಿಗೆ ಸೇರಿದ ಸ್ಮಶಾನವನ್ಮು ವಕ್ಫ್ (Waqf) ಆಸ್ತಿ ಎಂದು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಕೊಪ್ಪ ಗ್ರಾಮದ ಸರ್ವೆ ನಂಬರ್ 438ರಲ್ಲಿ ಇರುವ 1.37 ಗುಂಟೆ ಸ್ಮಶಾನ ಜಮೀನನ್ನು ವಕ್ಫ್ ಆಸ್ತಿ ಮಾಡಿಕೊಳ್ಳಲಾಗಿದೆ. 2019ರ ವರೆಗೆ ಈ 1.37 ಗುಂಟೆ ಜಮೀನು ಸರ್ಕಾರಿ ಸ್ಮಶಾನ ಎಂದು ಆರ್‌ಟಿಸಿಯಲ್ಲಿ ಉಲ್ಲೇಖವಾಗುತ್ತಿತ್ತು. ಆದರೆ 2019ರ ನಂತರ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ, ಪುತ್ರ ನಿಖಿಲ್ ವಿರುದ್ಧ ಎಫ್‌ಐಆರ್ ದಾಖಲು
Advertisement
Advertisement
ರಾಜ್ಯದಲ್ಲಿ ವಕ್ಫ್ ವಿವಾದ ಹೆಚ್ಚಾದ ಹಿನ್ನೆಲೆ ಕೊಪ್ಪ ಗ್ರಾಮಸ್ಥರು ಪರಿಶೀಲನೆ ಮಾಡಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕು ಹಾಗೂ ಈ ಲೋಪ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಬೆಲ್ಟ್ ಕಡ್ಡಾಯ
Advertisement