ಬೆಳಗಾವಿ: ಅಪಘಾತದಲ್ಲಿ ಮಿದುಳು ನಿಷ್ಕ್ರಿಯವಾಗಿದ್ದ ಹಿಂದೂ ಬಾಲಕಿಯ ಹೃದಯವನ್ನು ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ (ಟ್ರಾಫಿಕ್ ಮುಕ್ತ ಸಂಚಾರ) ಮೂಲಕ ಕೇವಲ 50 ನಿಮಿಷಗಳಲ್ಲಿ ತಂದು ಮುಸ್ಲಿಂ ಯುವಕನಿಗೆ ಕಸಿ ಮಾಡಲಾಗಿದೆ.
ಉತ್ತರ ಕನ್ನಡ ಮೂಲದ 15 ವರ್ಷದ ಬಾಲಕಿ ಅಪಘಾತದಲ್ಲಿ ಗಾಯಗೊಂಡು ಧಾರವಾಡ ಎಸ್‍ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಳು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಾಲಕಿ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಸಿಗೆ ಸೂಚಿಸಿದ್ದರು. ಇದೇ ಸಮಯಕ್ಕೆ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದ. ಬಾಲಕಿಯ ಪೋಷಕರ ಸಮ್ಮತಿ ಮೇರೆಗೆ ಹೃದಯ ಕಸಿ ಮಾಡಲು ಒಪ್ಪಿಗೆ ನೀಡಿದ್ದರು. ಹೀಗಾಗಿ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ಝೀರೊ ಟ್ರಾಫಿಕ್‍ನಲ್ಲಿ 50 ನಿಮಿಷಗಳ ಅಂತರದಲ್ಲಿ ಬಾಲಕಿಯ ಹೃದಯವನ್ನು ತರಲಾಯಿತು. ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮನೆ ಕೆಲಸಕ್ಕೆ ಸೇರಿ ಕಳ್ಳತನ ಮಾಡ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅರೆಸ್ಟ್
ದಾರಿಯುದ್ದಕ್ಕೂ ಎರಡು ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಅಂಬುಲೆನ್ಸ್ ಮೂಲಕ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾಗಿದೆ. ಧಾರವಾಡದಿಂದ ಬೆಳಗಾವಿಗೆ ಬಂದಿರುವ ಬಾಲಕಿಯ ಹೃದಯ ಕಸಿ ಕೆಎಲ್‍ಇ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ.ರಿಚರ್ಡ್ ಸಾಲ್ಡಾನಾ ನೇತೃತ್ವದಲ್ಲಿ ಮೂರು ಜನರ ತಂಡದೊಂದಿಗೆ 6 ಗಂಟೆಗಳ ಕಾಲ ನಡೆದಿದೆ. ಸದ್ಯ ಬಾಲಕಿ ಅಂಗಾಂಗಗಳ ಪೈಕಿ ಲೀವರ್ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಹಾಗೂ ಒಂದು ಕಿಡ್ನಿಯನ್ನು ಧಾರವಾಡ ಎಸ್‍ಡಿಎಂನಲ್ಲಿ ಓರ್ವರಿಗೆ ಕಸಿ ಮಾಡಲಾಗಿದೆ. ಮತ್ತೊಂದು ಕಿಡ್ನಿಯನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಸಾವಿನ್ನಲ್ಲೂ ನಾಲ್ಕು ಜೀವ ಉಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ
ಬೆಳಗಾವಿ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ:
ಧಾರವಾಡದಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ಕರೆತರುತ್ತಿರುವಾಗ ಬಾಲಕಿ ಹೃದಯವನ್ನು ಸರಿಯಾದ ಸಮಯಕ್ಕೆ ಕರೆತರಲು ಸೂಕ್ತ ವ್ಯವಸ್ಥೆಯನ್ನು ಬೆಳಗಾವಿ ಮತ್ತು ಧಾರವಾಡ ಪೊಲೀಸರು ಮಾಡಿದ್ದರು. ಇದೀಗ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಮತ್ತು ಧಾರವಾಡ ಎಸ್‍ಪಿ ನೇತೃತ್ವದಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ಬಾಲಕಿಯ ಹೃದಯ ಕೇವಲ 50 ನಿಮಿಷಗಳಲ್ಲಿ ಧಾರವಾಡದಿಂದ ಬೆಳಗಾವಿಗೆ ತಲುಪಿಸಲಾಗಿತ್ತು.