ಢಾಕಾ: ದೆಹಲಿಯಲ್ಲಿ (Delhi) ಲಿವ್ ಇನ್ ರಿಲೇಶನ್‌ನಲ್ಲಿದ್ದ ಗೆಳತಿಯ ಹತ್ಯೆಗೈದು (Murder) ಆಕೆಯ ದೇಹವನ್ನು ಪ್ರೇಮಿಯೇ 35 ಭಾಗಗಳನ್ನಾಗಿ ಮಾಡಿ ದೆಹಲಿಯಾದ್ಯಂತ ಕಾಡುಗಳಲ್ಲಿ ಎಸೆದಿರುವ ಭೀಕರ ಕೃತ್ಯಕ್ಕೆ ದೇಶ ಬೆಚ್ಚಿ ಬಿದ್ದಿದೆ. ಇದೀಗ ಇಂತಹುದೇ ಇನ್ನೊಂದು ಘಟನೆ ಬಾಂಗ್ಲಾದೇಶದಲ್ಲೂ (Bangladesh) ನಡೆದಿದೆ. ಹಂತಕ ಪ್ರೇಮಿ ಗೆಳತಿಯ ಹತ್ಯೆಗೈದು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಬಾಂಗ್ಲಾದೇಶದ ಅಬು ಬಕರ್ ಹಿಂದೂ ಯುವತಿ ಕವಿತಾ ರಾಣಿಯನ್ನು ಭೇಟಿಯಾಗಿ, ಪ್ರೀತಿಸಿ, ಬಳಿಕ ಆಕೆಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.
Advertisement
Advertisement
ಮೂಲಗಳ ಪ್ರಕಾರ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಂತಕ ಅಬು ಬಕರ್ ನವೆಂಬರ್ 6 ರಂದು ಕೆಲಸಕ್ಕೆ ಹಾಜರಾಗಿರಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ಸಾರಿಗೆ ಸಂಸ್ಥೆಯ ಮಾಲೀಕರು ಕೆಲ ಸಿಬ್ಬಂದಿಯನ್ನು ಆತನ ಬಾಡಿಗೆ ಮನೆಯಕಡೆ ನೋಡಿಕೊಂಡು ಬರುವಂತೆ ಹೇಳಿ ಕಳುಹಿಸಿದ್ದಾರೆ. ಆದರೆ ಅಬು ಬಕರ್ ಮನೆಗೆ ಬೀಗ ಹಾಕಿದ್ದನ್ನು ನೋಡಿ, ಆತ ನಾಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿತ್ತು.
Advertisement
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನ ಮನೆಗೆ ಬಂದು ಬಾಗಿಲನ್ನು ಒಡೆದು ನೋಡಿದ್ದಾರೆ. ಈ ವೇಳೆ ಪೊಲೀಸರಿಗೆ ಕಂಡಿದ್ದು ಭೀಕರವಾಗಿ ಹತ್ಯೆಯಾಗಿದ್ದ ಯುವತಿಯೊಬ್ಬಳ ತಲೆ. ಅದನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಪ್ರತ್ಯೇಕವಾಗಿ ಇಡಲಾಗಿತ್ತು. ಆಕೆಯ ಕೈಗಳನ್ನು ಕತ್ತರಿಸಿ ಎಸೆದಿದ್ದು, ಅದು ಬೇರೆಡೆ ಪತ್ತೆಯಾಗಿತ್ತು. ಬಳಿಕ ಪೊಲೀಸರು ಹತ್ಯೆಯಾದ ಯುವತಿಯನ್ನು ಕಾಳಿಪಾಟ್ ಬಾಚಾರ್ ಅವರ ಪುತ್ರಿ ಕವಿತಾ ರಾಣಿ ಎಂದು ಗುರುತಿಸಿದ್ದಾರೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ
Advertisement
ಅಬುಬಕರ್ ಮೊದಲೇ ಸಪ್ನಾ ಎಂಬ ಯುವತಿಯೊಂದಿಗೆ ಲಿವ್ ಇನ್ ರಿಲೇಶನ್‌ನಲ್ಲಿ ಇದ್ದ. ನವೆಂಬರ್ 5 ರಂದು ಸಪ್ನಾ ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕವಿತಾಳನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ. ಆದರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಬಕರ್ ಯುವತಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಆಕೆಯ ರುಂಡ, ಮುಂಡವನ್ನು ಬೇರ್ಪಡಿಸಿದ್ದಾನೆ. ಕೈಗಳನ್ನು ಕತ್ತರಿಸಿ ಚರಂಡಿಯಲ್ಲಿ ಎಸೆದಿದ್ದಾನೆ. ತಲೆಯನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ, ಉಳಿದ ದೇಹದ ಭಾಗಗಳನ್ನು ಪೆಟ್ಟಿಗೆಯೊಂದರಲ್ಲಿ ಎಸೆದು ಪರಾರಿಯಾಗಿದ್ದಾನೆ.
ಅದೇ ದಿನ ರಾತ್ರಿ ಅಬು ಬಕರ್ ಸಪ್ನಾ ಜೊತೆಗೆ ರುಪ್ಸಾ ನದಿ ದಾಟಿ ಢಾಕಾಗೆ ತೆರಳಿದ್ದಾನೆ. ಮರುದಿನ ಕವಿತಾ ರಾಣಿಯ ಶವ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ನವೆಂಬರ್ 6ರ ರಾತ್ರಿ ಪೊಲೀಸರು ಆರೋಪಿ ಅಬು ಬಕರ್ ಇರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಹಂತಕ ಹಾಗೂ ಆತನ ಲಿವ್ ಇನ್ ಪಾರ್ಟ್ನರ್ ಸಪ್ನಾಳನ್ನು ಕೂಡಾ ಗಾಜಿಪುರ ಜಿಲ್ಲೆಯ ಬಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಸೋಣದಂಗ ಠಾಣೆಗೆ ಒಪ್ಪಿಸಿದ್ದಾರೆ. ಬಂಧನದ ಬಳಿಕ ಅಬು ಬಕರ್ ತಾನೆಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕಂದಕಕ್ಕೆ ಬಿದ್ದ ಮಿನಿಬಸ್ – 11 ಮಕ್ಕಳು ಸೇರಿ 21 ಮಂದಿ ಸಾವು