ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೂ ಆರಂಭವಾಯಿತಾ ಮತಾಂತರ ಗಲಾಟೆ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಮತಾಂತರ ನಡೆಯುತ್ತಿದೆ ಎಂದು ಮನೆಯ ಮುಂದೆ ಹೋಗಿ ಸ್ಥಳೀಯರು ಗಲಾಟೆ ಮಾಡಿದ್ದಾರೆ.
Advertisement
ನಗರದ ಬ್ಯಾಡರಹಳ್ಳಿಯಲ್ಲಿ ಮತಾಂತರ ನಡೆಯುತ್ತಿದೆ ಎಂಬ ವಿಡಿಯೋ ವೈರಲ್ ಆಗಿದ್ದು, ಹಿಂದೂ ಧರ್ಮದವರನ್ನು ಕರೆತಂದು ಮತಾಂತರ ಮಾಡುತ್ತಿದ್ದಾರೆ. ಹಣದ ಆಸೆ ತೋರಿಸಿ ಪ್ರಾರ್ಥನೆ ಮಾಡಿಸುತ್ತಾರೆ ಎಂದು ಆರೋಪಿಸಿ, ಪ್ರಾರ್ಥನೆಗೆ ತಡೆಯೊಡ್ಡಿ ಸ್ಥಳೀಯರು ವೀಡಿಯೋ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹ ಇದೇ ಹಂಗಾಮ ಶುರುವಾಗಿದ್ದು, ಇದೀಗ ಬೆಂಗಳೂರಿನಲ್ಲೂ ಮತಾಂತರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವೀಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: RSS ವಿರುದ್ಧ ಹೇಳಿಕೆ – ಥಾಣೆ ಕೋರ್ಟ್‍ನಿಂದ ಜಾವೇದ್ ಅಖ್ತರ್‌ಗೆ ನೋಟಿಸ್
Advertisement
Advertisement
ಬ್ಯಾಡರಹಳ್ಳಿ ಬಿಬಿಎಂಪಿ ಸ್ಕೂಲ್ ಎಂದು ವೀಡಿಯೋದಲ್ಲಿ ಮಕ್ಕಳು ಹೇಳಿದ್ದಾರೆ. ಹೀಗಾಗಿ ಬ್ಯಾಡರಹಳ್ಳಿಯಲ್ಲಿ ಮತಾಂತರದ ಗುಲ್ಲು ಎದ್ದಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿ ಅಶೊಕ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಪ್ರತಿ ಬುಧವಾರ ನಮ್ಮ ಮನೆಗೆ ಪ್ಯಾಸ್ಟರ್ ಬರುತ್ತಾರೆ. ಚರ್ಚ್‍ನಿಂದ ಪ್ರಾರ್ಥನೆಗೆ ಹೋಗುತ್ತೇವೆ. ನಮ್ಮ ಅಪ್ಪ ಯೇಸುರಾಜನಿಗೆ ಹೋಗುತ್ತಾರೆ, ಅಮ್ಮ ಶಾರದಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡುತ್ತಾರೆ ಎಂದು ಮಕ್ಕಳು ಹೇಳಿದ್ದಾರೆ. ಫ್ರೀ ಸೈಟ್ ಸೇರಿದಂತೆ ವಿವಿಧ ಆಸೆ ತೋರಿಸಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.