ಧಾರವಾಡ: ಶಾಸಕ ಗರುಡಾಚಾರ್ ಅವರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಶ್ರೀರಾಮ ಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ತಡರಾತ್ರಿ ಒಂದು ಗಂಟೆಗೆ ಪುನೀತ್ ಕೆರೆ ಹಳ್ಳಿ, ತೇಜಸ್ ಗೌಡ ಎನ್ನುವ ಭಜರಂಗದಳದ (Bajrang Dal) ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತರನ್ನು ರೌಡಿಗಳ ರೀತಿಯಲ್ಲಿ ಬಂಧನ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಅದೂ ಸಹ ಬಿಜೆಪಿ ಸರ್ಕಾರದಲ್ಲೇ (BJP Government) ಹಿಂದೂ ಕಾರ್ಯಕರ್ತರನ್ನು ಈ ರೀತಿ ಬಂಧಿಸಿದ್ದು ಸರಿಯಲ್ಲ. ಅವರೇನು ರೌಡಿಗಳಾ? ಗೂಂಡಾಗಳಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್
Advertisement
Advertisement
ಭಜರಂಗದಳದ ಕಾರ್ಯಕರ್ತರನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ನಿಮಗೆ ಅಧಿಕಾರ ಸಿಕ್ಕ ತಕ್ಷಣ ಸೊಕ್ಕಿನಿಂದ ಈ ರೀತಿ ಮಾಡುವುದು ಸರಿಯಲ್ಲ. ನೀವು ಅಧಿಕಾರಕ್ಕೆ ಬಂದಿದ್ದೇ ಹಿಂದೂಗಳಿಂದ. ಬಂಧನವಾದ ಹಿಂದೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು
Advertisement
ದೇವಸ್ಥಾನದ 200 ಮೀಟರ್ ಒಳಗಡೆ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು. ಮುಸ್ಲಿಮರು ಏಕದೇವೋಪಾಸಕರು. ಯಾರು ಬಹುದೇವೋಪಾಸಕರು ಇದ್ದಾರೋ ಅವರನ್ನು ಕಾಫಿರ್ ಎನ್ನುತ್ತಾರೆ. ಮುಸ್ಲಿಮರು ದೇವರನ್ನು ಪೂಜೆ ಮಾಡುವವರಲ್ಲ. ದೇವಸ್ಥಾನವನ್ನು ಒಡೆಯುವವರು. ಬಿಜೆಪಿ ಈ ರೀತಿ ದುರ್ವರ್ತನೆ ತೋರುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.