ಹಿಂದೂಗಳ ಪರ ನಿಂತಿದ್ದಕ್ಕೆ ಜಿಹಾದಿಗಳಿಂದ ಬೆದರಿಕೆ ಕರೆ- ಶೋಭಾ ಕರಂದ್ಲಾಜೆ

Public TV
2 Min Read
udp shobha karandlaje

ಉಡುಪಿ: ತಬ್ಲಿಘಿಗಳ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ಕಳೆದ ಎರಡ್ಮೂರು ದಿನಿಗಳಿಂದ ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದು, ಜಿಹಾದಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂ ಯುವಕನ ಪರ ನಿಂತಿದ್ದಕ್ಕೆ ನನಗೂ ಬೆದರಿಕೆ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದಾನೆ. ಇದರಿಂದ ಅಲ್ಲಿನ ಜಿಹಾದಿಗಳು ಆತನ ಮೇಲೆ ಹಲ್ಲೇ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ ಕ್ಷಮೆಯಾಚಿಸಿ, ಫೀಸ್ಬುಕ್‍ನಿಂದ ಪೋಸ್ಟ್ ತಗೆಯುವಂತೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಖಂಡಿಸಿ ಟ್ವೀಟ್ ಮಾಡಿದ್ದೆ, ಮಾಧ್ಯಮದವರ ಜೊತೆ ಸಹ ಮಾತನಾಡಿದ್ದೆ. ಅಲ್ಲದೆ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದೇನೆ. ಹೀಗಾಗಿ ನನಗೆ ಬದರಿಕೆ ಕರೆ ಮಾಡುತ್ತಿದ್ದಾರೆ. ಅಲ್ಲದೆ ತುಂಬಾ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉಡುಪಿ, ಕುಂದಾಪುರ ಎಂದು ಹೇಳಿಕೊಂಡು ಯಾರೋ ಕರೆ ಮಾಡಿದರು, ಇದಕ್ಕೂ ಮುಂಚೆ ಸಹ ಹಲವರು ಫೋನ್ ಮಾಡಿದ್ದರು. ಲಾಕ್‍ಡೌನ್ ಸಡಿಲಿಕೆ ಕುರಿತು ಮಾತನಾಡಿ, ನಮ್ಮ ವಿರುದ್ಧ ಮಾತನಾಡಲು ಬರುತ್ತದೆ. ಇಂತಹದ್ದೆಲ್ಲ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

ಬದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ ಹಿಂದೆ ಅಣ್ಣಾಮಲೈ ಎಸ್‍ಪಿ ಆಗಿದ್ದಾಗಲೂ ಹೆಚ್ಚು ಬೆದರಿಕೆ ಕರೆ ಬರುತ್ತಿದ್ದವು. ಪಿಎಫ್‍ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಬಗ್ಗೆ ಮಾತನಾಡಿದ್ದೆ. ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡಿದ್ದೆ. ಆಗಲೂ ಬೆದರಿಕೆ ಕರೆ ಬಂದಿದ್ದವು. ಈ ಹಿಂದೆ ಸಹ ದೂರು ನೀಡಿದ್ದೆ, ಇಂಟರ್ನೆಟ್ ಮೂಲಕ ಕರೆ ಬರುತ್ತಿವೆ ಹೀಗಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ದೆಹಲಿಯಲ್ಲಿ ಸಹ ದೂರು ನೀಡಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕಾರಿ ಸಮಿತಿಯ ಸಾಮಾಜಿಕ ಜಾಲತಾಣದ ಕುರಿತ ಸಭೆಯಲ್ಲಿ ಸಹ ದೂರು ನೀಡಿದ್ದೇನೆ ಎಂದರು.

Tabligh e Jamaat Nizamuddin Markaz Delhi Corona 3

ಯಾರು ಹಿಂದೂಗಳ ಪರವಾಗಿ ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಜಿಹಾದಿಗಳು ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ಹಿಂದೂ ವಿರೋಧಿ ಕೆಲಸ ಮಾಡಲು, ಲವ್ ಜಿಹಾದ್ ಮಾಡಲು, ಲ್ಯಾಂಡ್ ಮಾಫಿಯಾ ಮಾಡಲು, ಕೊರೊನಾ ಜಿಹಾದ್ ಮಾಡಲು ಅವರಿಗೆ ವಿದೇಶದಿಂದ ಹಣ ಬರುತ್ತದೆ. ಹೀಗಾಗಿ ವಿದೇಶದಲ್ಲಿ ಕುಳಿತು ಕರೆ ಮಾಡಿ ನಮ್ಮನ್ನು ಹೆದರಿಸುತ್ತಾರೆ. ಅಶ್ಲೀಲವಾಗಿ ಮಾತನಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *