ಚಿಕ್ಕಮಗಳೂರು: ಏಳು ವರ್ಷದ ಹಿಂದೆ ಕೋಮು ದ್ವೇಷಕ್ಕೆ ಬಲಿಯಾದ ಶಿವಮೊಗ್ಗ ನಗರದ ಹಿಂದೂ ಕಾರ್ಯಕರ್ತನ ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಜ್ಜಿಯ ಆಸರೆಯಲ್ಲಿ ಕೊಪ್ಪ ಪಟ್ಟಣದಲ್ಲಿ ಬದುಕುತ್ತಿದ್ದಾನೆ.
ಮೃತ ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ತಾಯಿಯನ್ನು ಕಳೆದುಕೊಂಡ ಮೂರೇ ತಿಂಗಳಿಗೆ ತನ್ನ ತಂದೆಯನ್ನೂ ಕಳೆದುಕೊಂಡಿದ್ದ. ತಂದೆ-ತಾಯಿ ಇಲ್ಲದೆ ತಬ್ಬಲಿಯಾಗಿದ್ದ ಮಗುವನ್ನು ಏಳು ವರ್ಷದಿಂದ ಅಜ್ಜಿ ಹಾಗೂ ಚಿಕ್ಕಮ್ಮ ಸಾಕುತ್ತಿದ್ದಾರೆ. 2015ರ ಫೆಬ್ರವರಿ 19ರಂದು ಶಿವಮೊಗ್ಗ ನಗರದಲ್ಲಿ ನಡೆದ ಪಿಎಫ್‍ಐ ರ್ಯಾಲಿ ಮುಗಿದ ಬಳಿಕ ವಿಶ್ವನಾಥ್ ಶೆಟ್ಟಿಯ ಕೊಲೆಯಾಗಿತ್ತು. ಇದನ್ನೂ ಓದಿ: ಐದು ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶದಿಂದ 42 ಕಾರ್ಮಿಕರ ಬಲಿ!
ವಿಶ್ವನಾಥ್ ಶೆಟ್ಟಿ ಕೊಲೆಯಾದ ಬಳಿಕ ಸರ್ಕಾರ ಅವರ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನೂ ನೀಡಿತ್ತು. ಆದರೆ ಆ ಹಣ ವಿಶ್ವನಾಥ್ ಶೆಟ್ಟಿಯ ಮಗನ ಕೈ ಸೇರಲಿಲ್ಲ. ಬಡತನದಲ್ಲಿರುವ ಯಶಸ್ ಅಜ್ಜಿ ಸರಸ್ವತಿ ಹಾಗೂ ರೋಹಿಣಿ ಕೂಲಿ ಕೆಲಸ ಮಾಡಿಕೊಂಡು ತಾವು ಬದುಕುವುದರ ಜೊತೆ ಮಗುವನ್ನೂ ಸಾಕುತ್ತಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡೇ ಮಗುವಿನ ವಿದ್ಯಾಭ್ಯಾಸವನ್ನೂ ನೋಡಿಕೊಳ್ಳುತ್ತಿದ್ದಾರೆ. ಕೊಪ್ಪ ಪಟ್ಟಣದ ತಿಲಕ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಯಶಸ್ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ನೊಂದ ಕುಟುಂಬವಿದೆ. ಯಶಸ್ ಚಿಕ್ಕಮ್ಮ ರೋಹಿನಿ, ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಯಶಸ್ ಆರು ವರ್ಷದ ಮಗುವಿದ್ದಾಗ ತಂದೆ-ತಾಯಿಯನ್ನ ಕಳೆದುಕೊಂಡಿದ್ದಾನೆ. ಅಂದಿನಿಂದ ನನ್ನ ತಾಯಿ ಸಾಕುತ್ತಿದ್ದಾರೆ. ಅವನ ಶಿಕ್ಷಣಕ್ಕೆ ದಾನಿಗಳ ಸಹಕಾರ ಸಿಕ್ಕರೆ ಒಳ್ಳೆಯದಿತ್ತು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆ ಮಾರಾಟ – ಇಬ್ಬರ ಬಂಧನ