-ಇನ್ಮುಂದೆ ಮೊದಲನೇ ಅಟ್ಯಾಕ್, ಬಿಜೆಪಿ ಎಂಪಿ, ಎಂಎಲ್‍ಎ ಕಚೇರಿಗಳಿಗೆ
ತುಮಕೂರು: ಹುಷಾರಾಗಿರಿ, ಹಿಂದೂ ಕಾರ್ಯಕರ್ತರನ್ನು ಮುಟ್ಟಿದ್ರೆ ಒಂದಕ್ಕೆ ಹತ್ತು ಉತ್ತರ ಕೊಡ್ಬೇಕಾಗುತ್ತೆ. ಮನೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
Advertisement
ಇತ್ತೀಚೆಗೆ ಮುಸ್ಲಿಮರಿಂದ ಹಲ್ಲೆಗೊಳಗಾದ ಭಜರಂಗಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಹಲ್ಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಗೋರಕ್ಷಣೆ, ಲವ್ ಜಿಹಾದ್ ನಿಂದ ಹಿಂದೂ ಹುಡುಗಿಯರ ರಕ್ಷಣೆ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಂಜು ಭಾರ್ಗವ್ ಧ್ವನಿ ಎತ್ತಿದ್ದರು. ಹಾಗಾಗಿ ಪೂರ್ವಯೋಜಿತವಾಗಿ ಅವನ ಮೇಲೆ ಅಟ್ಯಾಕ್ ಆಗಿದೆ. ಲೋಕಲ್ ಕಾರ್ಪೋರೇಟರ್ ಒಬ್ಬರ ಪತಿ ಇಸ್ಮಾಯಿಲ್ ಎಂಬುವನು ಐದಾರು ಅಕ್ರಮ ಕಸಾಯಿಖಾನೆಗಳನ್ನು ನಡೆಸುತ್ತಿದ್ದು ಕಾನೂಬಾಹಿರ ಚಟುವಟಿಕೆ ನಡೆಸುತ್ತಿದ್ದಾನೆ. ಈ ವ್ಯಕ್ತಿಯನ್ನು ಬಂಧಿಸಿ ತನಿಖೆ ಆಗಬೇಕು ಎಂದು ನಾನು ಆಗ್ರಹಿಸುತ್ತೇನೆ. ಸ್ನೇಕ್ ಸಾಧಿಕ್ ಎಂಬಾತನದ್ದೂ ಕೈವಾಡ ಇದೆ. ಇಸ್ಮಾಯಿಲ್ ಮತ್ತು ಸ್ನೇಕ್ ಸಾಧಿಕ್‍ಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಹುಷಾರಾಗಿರಿ, ಹಿಂದೂ ಕಾರ್ಯಕರ್ತರನ್ನು ಮುಟ್ಟಿದ್ರೆ ಒಂದಕ್ಕೆ ಹತ್ತು ಉತ್ತರ ಕೊಡ್ಬೇಕಾಗುತ್ತೆ ಎಂದು ಗುಡುಗಿದರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಾಲಯದ ಮೇಲೆ ನಡೆದಿರೋ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Advertisement
Advertisement
ಈಗ ತುಮಕೂರಿನಲ್ಲಿ ಮಾತ್ರ ಬಂದ್ ಮಾಡಿ ಎಚ್ಚರಿಕೆ ನೀಡಿದ್ದೇವೆ. ಇಡೀ ರಾಜ್ಯದೊಳಗೆ ತುಮಕೂರು ಚಲೋ ಕರೆ ಕೊಟ್ಟರೆ ಐದಾರು ಲಕ್ಷ ಜನ ಬರುತ್ತೇವೆ. ಮನೆಯೊಳಗೆ ಹೊಕ್ಕು ಹೊಡಿತೀವಿ. ದಾದಾಗಿರಿ ಮಾಡುವಂತದ್ದು ಈ ದೇಶದಲ್ಲಿ ನಡೆಯಲ್ಲ. ಇನ್ಮೇಲೆ ಆಟ ನಡೆಯಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ರಾಜ್ಯದಲ್ಲಿರೋ ಎಲ್ಲಾ ಅಕ್ರಮ ಖಸಾಯಿಕಾನೆಗಳನ್ನು ನೀವು ನಿಲ್ಲಿಸ್ತಿರೋ ಅಥವಾ ನಾವು ನಿಲ್ಲಿಸಬೇಕೋ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗೋ ಕಳ್ಳರು ಅರೆಸ್ಟ್
Advertisement
ಸಂಸದ ಬಸವರಾಜು, ನಗರ ಶಾಸಕ ಜ್ಯೋತಿಗಣೇಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗೋವು ರಕ್ಷಣೆ ಮಾಡೋದು ಹಿಂದೂ ಕಾರ್ಯರ್ತನೊಬ್ಬನದ್ದೇ ಅಲ್ಲ, ಎಂಪಿ, ಎಂಎಲ್‍ಎ ನಿಮ್ಮದೂ ಜವಾಬ್ದಾರಿ ಇದೆ. ನಿಮ್ಮನ್ನು ಆರಿಸಿ ಕಳುಹಿಸಿದ್ದು ಹಿಂದೂ ಕಾರ್ಯಕರ್ತ ಏಟು ತಿನ್ನೋದಕ್ಕಾ? ನೀವು ಸ್ವಲ್ಪ ಏಟು ತಿನ್ನಿ, ನೀವು ಸ್ವಲ್ಪ ಓಡಾಡಿ, ಎಲ್ಲೆಲ್ಲಿ ಖಸಾಯಿಕಾನೆಗಳಿವೆ ಎಂದು ನಿಮಗೆ ಗೊತ್ತಿಲ್ವಾ? ಇನ್ಮೇಲೆ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಏನಾದ್ರು ಆದರೆ, ನಮ್ಮ ಮೊದಲನೆಯ ಅಟ್ಯಾಕ್, ಬಿಜೆಪಿ ಎಂಪಿ, ಎಂಎಲ್‍ಎ ಗಳ ಕಚೇರಿ ಮತ್ತು ಬಿಜೆಪಿ ಕಚೇರಿ ಮುಂದೆ ಎಂದು ಎಚ್ಚರಿಸಿದರು.