ಗದಗ: ನರಗುಂದ ಪಟ್ಟಣದಲ್ಲಿ ಎರಡು ಸಮುದಾಯದ ಗುಂಪಿನ ನಡುವೆ ಗಲಾಟೆ ನಡೆದ ಬಳಿಕ ಇದೀಗ ಹಿಂದೂಗಳ ಬಂಧನ ಹೆಚ್ಚಾಗಿದೆ. ಇನ್ನು ಮುಂದೆ ಹಿಂದೂಗಳ ಬಂಧನ ಮುಂದುವರೆದರೆ ನರಗುಂದ ಹೊತ್ತಿ ಉರಿಯುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
Advertisement
ನಗಗುಂದದಲ್ಲಿ ಜನವರಿ 17 ರಂದು ಎರಡು ಸಮುದಾಯ ಯುವಕರ ನಡೆದ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿತ್ತು. ಪ್ರಕರಣಲ್ಲಿ ಶಮೀರ್ ಶಹಪೂರ ಎಂಬಾತ ಚಿಕಿತ್ಸೆ ಫಲಿಸದೆ ಮೃತಪಟ್ಟ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಬಂಧನಕ್ಕೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಭೇಟಿಗಾಗಿ ಜಿಲ್ಲಾ ಕಾರಾಗೃಹಕ್ಕೆ ಪ್ರಮೋದ್ ಮುತಾಲಿಕ್ ಆಗಮಿಸಿ ಹಿಂದೂ ಯುವಕರನ್ನು ಅನವಶ್ಯಕವಾಗಿ ಬಂಧಿಸಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಅರಣ್ಯಾಧಿಕಾರಿಯನ್ನು ಪ್ರಭಾವ ಬಳಸಿ ವರ್ಗಾವಣೆ – ಹರೀಶ್ ಪೂಂಜಾ ವಿರುದ್ಧ ಗಂಭೀರ ಆರೋಪ
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನರಗುಂದಲ್ಲಿ ನಡೆದ ಘಟನೆ ಆಗಬಾರದಿತ್ತು, ತಪ್ಪಿತಸ್ಥರ ಬಂಧನ ಆಗಿದೆ. ಇನ್ನೂ ಬಂಧನ ಮುಂದುವರೆದಿದೆ. ಅನೇಕ ತಂದೆ, ತಾಯಿ, ಕುಟುಂಬ ಬಿಟ್ಟು, ಊರು ಬಿಟ್ಟು ಓಡಿ ಹೋಗ್ತಿದ್ದಾರೆ. ಅಲ್ಲಿಯ ಘಟನೆ ಬಗ್ಗೆ ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯಗೊಂಡಿದೆ. ಇನ್ಮುಂದೆ ಯಾರನ್ನಾದರೂ ಬಂಧನ ಮಾಡಿದ್ರೆ ನರಗುಂದ ಹೊತ್ತಿ ಉರಿಯಲಿದೆ ಹುಷಾರ್ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
Advertisement
Advertisement
ನರಗುಂದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂಗಳ ಮನೆ ಮನೆಗೆ ಹೋಗಿ ಬೆದರಿಸುವ ಪ್ರಯತ್ನ ನಡೀತಿದೆ. ಹಿಂದೂ ದೇವರನ್ನು ಅವಮಾನ ಮಾಡಿದವರನ್ನು ಯಾಕೆ ಹದ್ದು ಬಸ್ತಿನಲ್ಲಿ ಇಟ್ಟಿಲ್ಲ? ಲವ್ ಜಿಹಾದ್ ಪ್ರಕರಣದಲ್ಲಿ ಯಾಕೆ ಬಂಧನ ಆಗಿಲ್ಲ? ಹಿಂದೂ ಕಾರ್ಯಕರ್ತರ ಬೆರಳು ಕಟ್ ಮಾಡಿದವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಈ ಘಟನೆಗಳು ಮತ್ತೆ ಮರುಕಳಿಸದಂತೆ ಹದ್ದು ಬಸ್ತಿನಲ್ಲಿ ಇಡಬೇಕು. ಗೋ ಹತ್ಯ ನಿಷೇಧವಿದ್ದರೂ ಕಸಾಯಿ ಖಾನೆ ನಡಿತೀವೆ. ಗೋ ಕಳ್ಳತನವಾಗುತ್ತಿದೆ. ಲವ್ ಜಿಹಾದ್ ಹೆಸರಲ್ಲಿ ಹಿಂದೂ ಹುಡುಗಿಯರನ್ನು ಚುಡಾಯಿಸಲಾಗ್ತಿದೆ. ಇಂಥಹ ಕಿಡಿಗೇಡಿಗಳನ್ನು ಸರ್ಕಾರ ಹದ್ದು ಬಸ್ತಿನಲ್ಲಿ ಇಡಬೇಕು. ಹಿಂದೂ ಸಂಘಟನಾಕಾರರನ್ನು ಕೋವಿಡ್ ನಿಯಮದಲ್ಲಿ ಬಂಧಿಸಲಾಗ್ತಿದೆ. ಪಾದಯಾತ್ರೆ ನಡೆದಾಗ ಕೋವಿಡ್ ನಿಯಮ ಎಲ್ಲಿ ಹೋಗಿತ್ತು? ಸಭೆ ಸಮಾರಂಭಗಳು ನಡೆಯುತ್ತಿವೆ ಅಲ್ಲಿ ಯಾಕೆ ಕೋವಿಡ್ ನಿಯಮಗಳ ಬಗ್ಗೆ ಚಕಾರ ಎತ್ತುತ್ತಿಲ್ಲ?. ಈ ನಾಟಕೀಯ ಆಟ ಬಿಟ್ಟುಬಿಡಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ
ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಕೆ ಪಾಟೀಲ್, ಸಲೀಂ ಅಹ್ಮದ್, ಜಿ.ಎಸ್ ಪಾಟೀಲ್, ಬಿ.ಆರ್ ಯಾವಗಲ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ನರಗುಂದ ಮೃತನ ಕುಟುಂಬಕ್ಕೆ ಭೇಟಿ ನೀಡಿ ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಿದ್ದಾರೆ. ಕಾಂಗ್ರೆಸ್ (ಐ) ಎಂದರೆ ಕಾಂಗ್ರೆಸ್ ಇಸ್ಲಾಂ ಅಂತಾಗಿದೆ. ಕಾಂಗ್ರೆಸ್ ನವರು ಇರೋದೇ ಮುಸ್ಲೀಮರಿಗಾಗಿ. ಕಾಂಗ್ರೆಸ್‍ನಲ್ಲಿರು ಹಿಂದೂಗಳು ಗಭೀರವಾಗಿ ಯೋಚಿಸಬೇಕು. ನೀವು ಕಾಂಗ್ರೆಸ್‌ನಲ್ಲಿದ್ದೀರಿ ಎಂದು ಹಿಂದೂಗಳನ್ನು ಬಿಡಲ್ಲಾ. 100 ಕೋಟಿ ಹಿಂದೂಗಳ ಕೊಲೆ ಎಂದು ಓವೈಸಿ ಹೇಳಿದ್ದಾರೆ. ಸಿದ್ದರಾಮಯ್ಯ, ಎಚ್.ಕೆ ಪಾಟೀಲ್ ಈ ಹಿಂದೆ ನಡೆದ ಘಟನೆ ಬಗ್ಗೆಯೂ ಖಂಡಿಸಬೇಕಿತ್ತು. ಬರೀ ಹಿಂದೂಗಳನ್ನು ಖಂಡಿಸುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನವರು ವಿರೋಧ ಪಕ್ಷದ ನಾಯಕರಾಗಿದ್ದು ಮುಸ್ಲಿಮರಿಗಲ್ಲ, ಎಲ್ಲರಿಗಾಗಿದ್ದೀರಿ ಎಂಬ ಪ್ರಜ್ಞೆ ಇರಲಿ. ಹಿಂದೂಗಳ ಮೇಲೆ ಹಲ್ಲೆಯಾದಾಗ ಎಷ್ಟು ಜನರ ಮನೆಗೆ ಭೇಟಿ ಕೊಟ್ಟಿದ್ದೀರಿ? ಹೀಗೆ ತಾರತಮ್ಯ ಮಾಡುವುದರಿಂದಲೇ ಕಾಂಗ್ರೆಸ್ ಮೂಲೆಗುಂಪಾಗಿದೆ. ಕಾಂಗ್ರೆಸ್ ಕಸದ ತೊಟ್ಟಿಗೆ ಹೋಗಿದೆ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ಮತ ಎಣಿಕೆಯವರೆಗೆ ಮಾತ್ರ ಸಮಾಜವಾದಿ, ರಾಷ್ಟ್ರೀಯ ಲೋಕದಳದ ಮೈತ್ರಿ: ಅಮಿತ್ ಶಾ
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶ್ರೀರಾಮಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ್, ಜಿಲ್ಲಾಧ್ಯಕ್ಷ ರಾಜು ರೋಖಡೆ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.