ಮಂಡ್ಯ: ಹಿಜಬ್ ವಿವಾದದ ವೇಳೆ ಕಾಲೇಜ್ ಕ್ಯಾಂಪಸ್‍ನಲ್ಲಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ಮುಸ್ಕಾನ್ ಹಾಗೂ ಆಕೆಯ ಕುಟುಂಬ ಸೌದಿ ಅರೇಬಿಯಾಗೆ ತೆರಳಿರುವುದನ್ನು ಅನುಮಾನಿಸಿ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಂಡ್ಯದ ಅನಿಲ್ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದಾರೆ.
Advertisement
ಹಿಜಬ್ ವಿವಾದದ ವೇಳೆ ಅಲ್ಲಾ ಹು ಅಕ್ಬರ್ ಘೋಷಣೆ ಕೂಗುವ ಮೂಲಕ ಮುಸ್ಕಾನ್ ರಾಷ್ಟ್ರ ವ್ಯಾಪ್ತಿ ಸುದ್ದಿಯಾಗಿದ್ದರು. ಘೋಷಣೆ ಬಳಿಕ ದೇಶಾದ್ಯಂತ ಹಿಜಬ್ ಲೇಡಿ ಅಂತಲೇ ಮುಸ್ಕಾನ್ ಪ್ರಖ್ಯಾತಿ ಹೊಂದಿದ್ದಾರೆ. ರಾಜ್ಯ, ಹೊರ ರಾಜ್ಯದ ಮುಸ್ಲಿಂ ಮುಖಂಡರಿಂದ ಮುಸ್ಕಾನ್‍ಗೆ ಪ್ರಶಂಸೆ, ಉಡುಗೊರೆ ಹರಿದು ಬಂದಿದ್ದವು. ಅಲ್ಲದೇ ಐ ಫೋನ್ ಮೊಬೈಲ್‍ನನ್ನು ಉಡುಗೊರೆಯಾಗಿ ಮಹಾರಾಷ್ಟ್ರದ ಶಾಸಕ ನೀಡಿದ್ದರು. ಈ ವೇಳೆ ಸಾಕಷ್ಟು ಮಂದಿ ಮುಸ್ಕಾನ್ ಮನೆಗೆ ಭೇಟಿ ನೀಡಿ ಪ್ರಶಂಸೆ ನೀಡಿದ್ದರು. ಇದನ್ನೂ ಓದಿ: ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ
Advertisement
Advertisement
ಇದಾದ ಬಳಿಕ ಮುಸ್ಕಾನ್‍ನನ್ನು ಅಲ್ ಖೈದಾ ಉಗ್ರ ಅಲ್ ಜವಹರಿ ಹಾಡಿ ಹೊಗಳಿದ್ದ. ಉಗ್ರನ ಹೊಗಳಿಕೆ ಬಳಿಕ ಅನಿಲ್ ಅವರು ಮುಸ್ಕಾನ್ ಮತ್ತು ಅವರ ಕುಟುಂಬವನ್ನು ತನಿಖೆ ನಡೆಸುವಂತೆ ಮಂಡ್ಯ ಎಸ್‍ಪಿಗೆ ದೂರು ನೀಡಿದ್ದರು. ಆದರೆ ಇದುವರೆಗೆ ಮಂಡ್ಯ ಪೊಲೀಸರು ಯಾವುದೇ ವಿಚಾರಣೆ ಮಾಡಿರಲಿಲ್ಲ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ
Advertisement
ಈ ಎಲ್ಲಾ ಬೆಳವಣಿಗೆ ನಡುವೆ ಮುಸ್ಕಾನ್ ಮತ್ತು ಕುಟುಂಬ ಸೌದಿಗೆ ಪ್ರವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗೃಹಮಂತ್ರಿಗೆ ಅನಿಲ್ ಮತ್ತೆ ದೂರು ನೀಡಿದ್ದು, ಮುಸ್ಕಾನ್ ಕುಟುಂಬ, ವಿದೇಶ ಪ್ರವಾಸ, ಭೇಟಿಯಾದ ವ್ಯಕ್ತಿ, ಸಂಘಟನೆಗಳ ಕುರಿತು ತನಿಖೆ ಮಾಡಬೇಕೆಂದು ಮನವಿ ಮಾಡಿದ್ದಾರೆ.