ಚೆನ್ನೈ: ಹಿಂದಿಯು ಹಿಂದುಳಿದ ರಾಜ್ಯಗಳ ಭಾಷೆ ಎಂದು ಹೇಳುವ ಮೂಲಕ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಸಂಸದ ಟಿಕೆಎಸ್ ಇಳಂಗೋವನ್ ಭಾಷಾ ಚರ್ಚೆಯಲ್ಲಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಇಳಂಗೋವನ್ ಅವರು ಭಾಷಾ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಹಿಂದುಳಿದ ರಾಜ್ಯಗಳಲ್ಲಿ ಮಾತ್ರ ಹಿಂದಿ ಸ್ಥಳೀಯ ಭಾಷೆಯಾಗಿದೆ. ಹಿಂದಿ ಶೂದ್ರರಿಗೆ ಮಾತ್ರ ಎಂದು ಹೇಳುವ ಮೂಲಕ ಭಾಷೆಗೆ ಮೇಲು-ಕೀಳು ಭಾವನೆಯನ್ನು ತಂದಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ: TN ಸಚಿವ ಪೊನ್ಮುಡಿ
Advertisement
Advertisement
ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ದೇಶಗಳನ್ನು ನೋಡಿ. ಇವೆಲ್ಲವೂ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲವೇ? ಹಿಂದಿ ಈ ರಾಜ್ಯಗಳ ಜನರ ಮಾತೃಭಾಷೆಯಲ್ಲ ಎಂದು ಹೇಳಿದರು.
Advertisement
ಹಿಂದಿ ನಮ್ಮನ್ನು ಶೂದ್ರರನ್ನಾಗಿ ಪರಿವರ್ತಿಸುತ್ತದೆ. ಹಿಂದಿ ನಮಗೆ ಒಳ್ಳೆಯದಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!
Advertisement
ಏಪ್ರಿಲ್‍ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ, ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸಬೇಕು. ಸ್ಥಳೀಯ ಭಾಷೆಯಾಗಿ ಅಲ್ಲ ಎಂದು ಹೇಳಿದ್ದರು.