ಹಿಂದಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʻಕಾಂತಾರʼ: 50 ಕೋಟಿ ರೂ. ಗಳಿಸಿದ ರಿಷಬ್‌ ಚಿತ್ರ

Public TV
2 Min Read
kantara 3

ಚಿತ್ರರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ ಸಿನಿಮಾ `ಕಾಂತಾರ’ (Kantara Film) ಪ್ಯಾನ್ ಇಂಡಿಯಾ ಸಿನಿಮಾವಾಗಿ ಕಮಾಲ್ ಮಾಡುತ್ತಿದೆ. ಇನ್ನೂ ಬಾಲಿವುಡ್‌ನ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿ, ಮುನ್ನುಗ್ಗುತ್ತಿದೆ.

KANTARA

ಬಹುಮುಖ ಪ್ರತಿಭೆಯಿಂದ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ನಟನೆಯ `ಕಾಂತಾರ’ ಹಿಂದಿ ಬಾಕ್ಸಾಫೀಸ್‌ನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ. ರಿಷಬ್ ನಟನೆ ಮತ್ತು ನಿರ್ದೇಶನಕ್ಕೆ ಬಾಲಿವುಡ್ ಮಂದಿ ಬೋಲ್ಡ್‌  ಆಗಿದ್ದಾರೆ.

Kantara 5

ಇನ್ನೂ `ಕಾಂತಾರ’ ಹಿಂದಿ ವರ್ಷನ್‌ನಲ್ಲಿ ಬಾಹುಬಲಿ 2, ಕೆಜಿಎಫ್ 2, ಆರ್‌ಆರ್‌ಆರ್, 2.0 ಬಾಹುಬಲಿ, `ಪುಷ್ಪ’ ನಂತರ 7ನೇ ಹೈಯೆಸ್ಟ್ ಕಲೆಕ್ಷನ್ ಸಿನಿಮಾವಾಗಿದೆ. ಮೊದಲ ವಾರ ಮತ್ತು ಎರಡನೇ ವಾರದ ಕಲೆಕ್ಷನ್‌ನ ಮೀರಿ ಮೂರನೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ:ನಟಿ ಪೂಜಾ ಹೆಗ್ಡೆ ಜೊತೆ ಕಿಸ್ ಮಾಡಲಾರೆ: ಖ್ಯಾತ ನಟ ಅಡವಿ ಶೇಷ

ಹೊಂಬಾಳೆ ಸಂಸ್ಥೆಯ(Hombale Films) `ಕಾಂತಾರ’ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ವಾರ 15 ಕೋಟಿ, 2ನೇ ವಾರ 16.70 ಕೋಟಿ, 3ನೇ ವಾರ 19.95 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು 51.65 ಕೋಟಿ ಗಳಿಸಿ `ಕಾಂತಾರ’ ಹೊಸ ದಾಖಲೆ ಬರೆದಿದೆ. ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದು ʻಕಾಂತಾರʼ ಸಿನಿಮಾ ಹಿಂದಿ ವರ್ಷನ್‌ನಲ್ಲಿ ಕಮಾಲ್‌ ಮಾಡುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *