ನವದೆಹಲಿ: ಅದಾನಿ ಗ್ರೂಪ್‍ನ ವರದಿ ನಂತರ ಅಮೆರಿಕ ಮೂಲದ ಹಿಂಡೆನ್‍ಬರ್ಗ್ (Hindenburg) ರಿಸರ್ಚ್ ಇದೀಗ ಮಾಜಿ ಟ್ವಿಟ್ವರ್ ಸಿಇಒ ಹಾಗೂ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಸ್ಥಾಪಿಸಿದ ಪೇಮೆಂಟ್ ಕಂಪನಿಯಾದ ಬ್ಲಾಕ್ (Block) ವಿರುದ್ಧ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.
ಹಿಂಡೆನ್‍ಬರ್ಗ್ ರಿಸರ್ಚ್ ಇದೀಗ ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ಲಾಕ್ ಇಂಕ್‌ನ ಮೇಲೆ ಕಣ್ಣಿಟ್ಟಿದ್ದೆವು. ಈ ಹಿಂದೆ ಬ್ಲಾಕ್ ಇಂಕ್ ಕಂಪನಿಯನ್ನು ಅನ್ನು ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿತ್ತು. ಬ್ಲಾಕ್ ಕಂಪನಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿವೆ. ಈ ಕಂಪನಿಯು ಹೂಡಿಕೆದಾರರಿಗೆ ತನ್ನ ಅಂಕಿ ಅಂಶಗಳ ಮಾಹಿತಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಬ್ಲಾಕ್‍ನಲ್ಲಿರುವ ಖಾತೆಗಳು 40 – 75% ನಕಲಿಯಾಗಿದೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ತಿಳಿಸಿದೆ.
ಬ್ಲಾಕ್‍ನ ಮಾಜಿ ಉದ್ಯೋಗಿಗಳನ್ನು, ಇಂಡಸ್ಟ್ರಿಯ ಪರಿಣಿಯತರನ್ನೂ ಸಂದರ್ಶಿಸಲಾಗಿದ್ದು, ಕಂಪನಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದೆ.
ವರದಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬ್ಲಾಕ್‍ನ ಷೇರು ದರ 20% ಕುಸಿದಿದೆ. ಜಾಕ್ ಡೋರ್ಸೆ ಒಡೆತನದ ಬ್ಲಾಕ್ ಕಂಪನಿಯು ಮೊಬೈಲ್ ಪೇಮೆಂಟ್ ಕಂಪನಿಯಾಗಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇದರ ಷೇರು ದರದಲ್ಲಿ 639% ಏರಿಕೆಯಾಗಿತ್ತು. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!
ಈ ಹಿಂದೆ ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್