ನವದೆಹಲಿ: ಅದಾನಿ ಸಮೂಹದ (Adani Group of companies) ವಿರುದ್ಧದ ಹಿಂಡೆನ್ಬರ್ಗ್ ಸಂಶೋಧನಾ ವರದಿಯ ( Research report) ವಿವಾದದ ಕುರಿತು ತನಿಖೆ ನಡೆಸಲು ಆರು ತಿಂಗಳ ಅವಧಿ ವಿಸ್ತರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (Securities and Exchange Board of India) ಸುಪ್ರೀಂ ಕೋರ್ಟ್ಗೆ (Supreme Court) ಮನವಿ ಸಲ್ಲಿಸಿದೆ.
Advertisement
ಈ ವರದಿಗೆ ಸಂಬಂಧಿಸಿದ ತನಿಖೆಗೆ ಸುಪ್ರೀಂ ಸೆಬಿಗೆ (SEBI) ಮಾರ್ಚ್ 2ರಂದು ಅನುಮತಿ ನೀಡಿತ್ತು. ಅದು ಮೇ 2ರಂದು ಪೂರ್ಣಗೊಳ್ಳಬೇಕಿತ್ತು. ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಎ.ಎಂ ಸಪ್ರೆ (Justice AM Sapre)ನೇತೃತ್ವದ ತಜ್ಞರ ಸಮಿತಿಯ ತನಿಖೆಯ ಜೊತೆಗೆ ಸೆಬಿ ತನಿಖೆಗೂ ಆದೇಶಿಸಲಾಗಿತ್ತು. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್
Advertisement
Advertisement
ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇನ್ನೂ ಆರು ತಿಂಗಳು ಅವಕಾಶ ವಿಸ್ತರಣೆಗೆ ಸೆಬಿ ಶನಿವಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ. ಅಲ್ಲದೆ ಅಲ್ಲಿ ವಿವಿಧ ವರ್ಗಾವಣೆ ನಡೆದಿದೆ ಎಂದು ಸೆಬಿ ತನ್ನ ಮನವಿಯಲ್ಲಿ ತಿಳಿಸಿದೆ.
Advertisement
ಸಂಪೂರ್ಣ ತನಿಖೆಗೆ ಹತ್ತು ವರ್ಷಗಳಿಗೂ ಹಳೆಯದಾದ ವಿವರ ಪಡೆಯಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ತನಿಖೆಗೆ ಸುಮಾರು 15 ತಿಂಗಳು ಬೇಕಾಗುತ್ತದೆ. ಆದರೆ 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸೆಬಿ ಹೇಳಿಕೊಂಡಿದೆ. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್