ನವದೆಹಲಿ: ಹಿಂಡೆನ್ಬರ್ಗ್ (Hindenburg) ವರದಿ ಬಳಿಕ ಉದ್ಯಮಿ ಗೌತಮ್ ಅದಾನಿ (Gautam Adani) ಕಂಪನಿಗಳ ಷೇರುಗಳಲ್ಲಿ ಭಾರೀ ಕುಸಿತ ಕಂಡಿದ್ದು ಅವರ ಸಂಪತ್ತಿನ ಮೌಲ್ಯ 5,000 ಕೋಟಿ ಡಾಲರ್(ಸುಮಾರು 4 ಲಕ್ಷ ಕೋಟಿ ರೂ.) ಕಡಿಮೆಯಾಗಿದೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ (Bloomberg Billionaires Index) ನವೀಕರಿಸಿದ ಡೇಟಾದ ಪ್ರಕಾರ ಅವರ ಒಟ್ಟು ಸಂಪತ್ತು ಈಗ 49.1 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ.) ಆಗಿದೆ.
ಒಂದು ತಿಂಗಳ ಹಿಂದೆ ಗೌತಮ್ ಅದಾನಿ ಸಂಪತ್ತಿನ ಮೌಲ್ಯ ಸುಮಾರು 120 ಶತಕೋಟಿ ಡಾಲರ್ (ಸುಮಾರು 9.91 ಲಕ್ಷ ಕೋಟಿ ರೂ.) ನಷ್ಟಿತ್ತು. ಈ ಮೂಲಕ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಹಿಂಡೆನ್ಬರ್ಗ್ ವರದಿ ಬಳಿಕ ಷೇರುಗಳ ಕುಸಿತದಿಂದಾಗಿ ದೊಡ್ಡ ಪ್ರಮಾಣದ ಸಂಪತ್ತನ್ನು ಅದಾನಿ ಕಳೆದುಕೊಂಡಿದ್ದಾರೆ.
Advertisement
Advertisement
ಅದಾನಿ ಗ್ರೂಪ್ ಹಿಂಡೆನ್ಬರ್ಗ್ ಮಾಡಿದ ಆರೋಪಗಳನ್ನು ತಳ್ಳಿಹಾಕಿದೆ. ಅದರೂ ವರದಿಯು ಹೂಡಿಕೆದಾರರು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಇದರ ಪರಿಣಾಮವಾಗಿ ಅದರ ಪಟ್ಟಿಮಾಡಿದ ಕಂಪನಿಗಳ ಷೇರುಗಳ ಬೆಲೆಗಳು ನಿರಂತರವಾಗಿ ಕುಸಿಯುತ್ತಿವೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ
Advertisement
Advertisement
ಇದು ಕೈಗಾರಿಕಾ ಉದ್ಯಮಿ ಗೌತಮ್ ಅದಾನಿ ಸಂಗ್ರಹಿಸಿದ ವೈಯಕ್ತಿಕ ಸಂಪತ್ತಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅವರು ವರ್ಷದ ಆರಂಭದಿಂದ 71 ಶತಕೋಟಿ ಡಾಲರ್ನಷ್ಟು (ಸುಮಾರು 5 ಲಕ್ಷ ಕೋಟಿ ರೂ.) ಸಂಪತ್ತು ಕಳೆದುಕೊಂಡಿದ್ದಾರೆ. ಇದರಿಂದಾಗಿ 500 ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಹಂತ ಹಂತವಾಗಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ನಂತೆ ಇನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k