ಲದಾಖ್: ವಿಶ್ವ ಯೋಗ ದಿನಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ದೇಶದೆಲ್ಲೆಡೆ ಈ ಸುದಿನಕ್ಕಾಗಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲದಾಖ್‍ನಲ್ಲಿ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಸುದ್ದಿಯಾಗಿದ್ದಾರೆ.
ಸುಮಾರು 18,000 ಅಡಿ ಎತ್ತರದ ಲದಾಖ್‍ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಹಿಮದ ರಾಶಿ ನಡುವೆ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದನ್ನೂ ಓದಿ:ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ
Advertisement
Advertisement
ಐಟಿಬಿಪಿ ಸಿಬ್ಬಂದಿ ಯೋಗ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಉಣ್ಣೆಯ ವಸ್ತ್ರಗಳನ್ನು ತೆಗೆದು ಯೋಗ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
Advertisement
ಈ ಬಗ್ಗೆ ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್ ಅವರು ಮಾತನಾಡಿ, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜನರ ಜೀವನದಲ್ಲಿ ಯೋಗ ಪ್ರಮುಖ ಅಂಶವಾಗಿದೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೇಳಿದರು.
Advertisement
#Himveers of #ITBP gearing up for #5thInternationalDayofYoga at 18 K feet in Laddakh@narendramodi #yoga#InternationalYogaDay2019 #YogaDay2019 pic.twitter.com/8brk7jtb5Y
— ITBP (@ITBP_official) June 14, 2019
ಯೋಗ ಹಾಗೂ ಯೋಗದ ಪ್ರಾಮುಖ್ಯತೆ ಬಗ್ಗೆ ಐಟಿಬಿಪಿ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಕೆಲವು ಫೋಟೋಗಳು, ವಿಡಿಯೋಗಳನ್ನು ಕೂಡ ಐಟಿಬಿಪಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Sh S S Deswal, DG ITBP addressing jawans on importance of #Yoga at a session at a high altitude BOP in Uttarakhand.#Himveers of #ITBP gearing up for the #InternationalDayOfYoga2019 #YogaDay2019 #5thInterantionalDayofYoga pic.twitter.com/FPVlGMQ4mn
— ITBP (@ITBP_official) June 15, 2019