ಮುಂಬೈ: ಬಾಲಿವುಡ್ ಗಾಯಕ, ನಟ ಹಿಮೇಶ್ ರೇಶಮಿಯಾ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಹಿಮೇಶ್ ರೇಶಮಿಯಾ ಸಹ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ರಾಮ್ ರಂಜನ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಗೊಂಡಿದ್ದ ರೇಶಮಿಯಾ ಚೇತರಿಸಿಕೊಂಡಿದ್ದಾರೆ. ರಾಮ್ ರಂಜನ್ ಬಿಹಾರದ ಮೂಲದವರಾಗಿದ್ದು, ರೇಶಮಿಯಾ ಅವರ ಕಾರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.
ತಮ್ಮದೇ ಶೈಲಿಯ ಹಾಡುಗಳನ್ನು ನೀಡಿರುವ ಹಿಮೇಶ್ ರೇಶಮಿಯಾ ಬಾಲಿವುಡ್ ನಲ್ಲಿ ನಾಯಕ ನಟ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ರೇಶಮಿಯಾ ಗುರುತಿಸಿಕೊಂಡಿದ್ದಾರೆ.