ಖ್ಯಾತ ಗಾಯಕ ಹಿಮೇಶ್ ರೇಶಮಿಯಾಗೆ ಪಿತೃ ವಿಯೋಗ

Public TV
1 Min Read
FotoJet 29

ಖ್ಯಾತ ಗಾಯಕ, ಸಂಗೀತ ಸಂಯೋಜಕ ಹಿಮೇಶ್ ರೇಶಮಿಯಾ (Himesh Reshammiya) ತಂದೆ ವಿಪಿನ್ ರೇಶಮಿಯಾ (Vipin Reshammiya) ನಿಧನರಾಗಿದ್ದಾರೆ. 87 ವಯಸ್ಸಿನ ವಿಪಿನ್ ಹಿಮೇಶ್ ರೇಶಮಿಯಾ ಉಸಿರಾಟದ ಸಮಸ್ಯೆಗಳು ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸೆ.18ರಂದು ಮುಂಬೈನ ಕೋಕಿಲಾಬೆನ್ ಧಿರೂಭಾಯಿ ಅಂಬಾನಿ ಆಸ್ಪತ್ರಗೆ ದಾಖಲಾಗಿದ್ರು, ಅದೇ ದಿನ ರಾತ್ರಿ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಬೈನ ಜುಹುವಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಬಾಲಿವುಡ್‌ನಲ್ಲಿ ಮೂರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಹಿಮೇಶ್ ತಂದೆ ವಿಪಿನ್, ಒಂದು ಸಿನಿಮಾಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ರು. 1988ರಲ್ಲಿ `ಇನ್‌ಸಾಫ್ ಕಿ ಜಂಗ್’, 2014ರಲ್ಲಿ ‘ದಿ ಎಕ್ಸ್ಪೋಸ್’, 2016ರಲ್ಲಿ ‘ತೇರಾ ಸುರೂರ್’ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕೀರ್ತಿ ವಿಪಿನ್ ರೇಶಮಿಯಾಗೆ ಸಲ್ಲುತ್ತೆ.

ಹಿಮೇಶ್ ತಂದೆಗೆ 87 ವರ್ಷವಾದ್ದರಿಂದ ತೀವ್ರ ಉಸಿರಾಟದ ಸಮಸ್ಯೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಿಮೇಶ್ ತಂದೆ ವಿಪಿನ್ ರೇಶಮಿಯಾ ನಿನ್ನೆ ರಾತ್ರಿ (ಸೆ.18) 8.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ವಿಪಿನ್ ರೇಶಮಿಯಾ ಅಗಲಿಕೆಗೆ ಇಡೀ ಬಾಲಿವುಡ್ ಮಂದಿ ಸಂತಾಪ ಸೂಚಿಸಿದೆ.

Share This Article