ಚಾಮರಾಜನಗರ: ದಟ್ಟ ಮಂಜು ತಂಪು ತಂಪು ವಾತಾವರಣವಷ್ಟೇ ಅಲ್ಲದೇ ಗೋಪಾಲಸ್ವಾಮಿ ಬೆಟ್ಟದಲ್ಲಿ ಇತ್ತೀಚಿಗೆ ಹುಲಿರಾಯ ಕೂಡ ಪ್ರವಾಸಿಗರಿಗೆ ಆಗಾಗ ದರ್ಶನ ನೀಡುತ್ತಿದ್ದು ಭಕ್ತರು ಸಖತ್ ಖುಷಿಯಾಗುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಬೆಟ್ಟದ ಸುತ್ತಮುತ್ತಲಿನ ಕಾಡನ್ನು ತನ್ನ ಸರಹದ್ದನ್ನಾಗಿ ಮಾಡಿಕೊಂಡಿದ್ದು ಆಗಾಗ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಬೆಟ್ಟದ ಹುಲಿ ಅಂತಲೇ ಕರೆಸಿಕೊಳ್ಳುತ್ತಿವೆ.
ದಟ್ಟ ಮಂಜಿನ ಆನಂದ ಅನುಭವಿಸುತ್ತಿದ್ದ ಪ್ರವಾಸಿಗರು ಈಗ ಬೆಟ್ಟದ ಹುಲಿಯನ್ನು ಕಂಡು ಖುಷಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕೂಡ ವೈರಲ್ ಆಗಿದೆ.