ಗುವಾಹಟಿ: ರಾಹುಲ್ ಗಾಂಧಿ ಮತ್ತು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ (Himanta Sarma) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಭ್ರಷ್ಟಾಚಾರ ಮಾಡಿರುವ ನಿಮ್ಮನ್ನ ಜೈಲಿಗೆ ಹಾಕಬೇಕು ಎಂದಿದ್ದ ರಾಹುಲ್ ಹೇಳಿಕೆಗೆ ಶರ್ಮಾ ಕೆಂಡಾಮಂಡಲರಾಗಿದ್ದಾರೆ.
ನಿಮ್ಮ ಹಾಗೆ ಬಾಟೆಲ್ ಹಾಲು ಕುಡಿದು ಬೆಳೆದವನಲ್ಲ. ತಾಯಿ ಎದೆಹಾಲು ಕುಡಿದ ಮಗ ನಾನು. ಪೈಕಾನ್ ಮೀಸಲು ಅರಣ್ಯದಲ್ಲಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಗೆ ರಾಹುಲ್ ಗಾಂಧಿ ದ್ವೇಷಭಾಷಣ ಕಾರಣ. ರಾಹುಲ್ (Rahul Gandhi), ಖರ್ಗೆ ಅಸ್ಸಾಂಗೆ ಭೇಟಿ ನೀಡಿದ ವೇಳೆ ಮಾಡಿರುವ ಭಾಷಣಗಳನ್ನು ಅಧಿಕಾರಿಗಳು ಪರಿಶೀಲಿಸ್ತಿದ್ದಾರೆ. ಸಾಕ್ಷ್ಯಾಧಾರ ಸಿಕ್ಕರೆ ನಿಮ್ಮನ್ನ ಜೈಲಿಗಟ್ಟುತ್ತೇನೆ ಅಂತ ಗುಡುಗಿದ್ದಾರೆ. ಅಲ್ಲದೇ ದೇಶದಲ್ಲಿ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕಾಗಿ ಕಾಯುತ್ತಿವೆ ಅಂದಿದ್ದಾರೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್ – ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿಕೆ
ಇನ್ನೂ, ರಾಬರ್ಟ್ ವಾದ್ರಾ (Robert Vadra) ಭೂ ಅವ್ಯವಹಾರ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿಕೋಹ್‌ಪುರ ಭೂ ವ್ಯವಹಾರ ಕೇಸ್ – ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ನನ್ನ ಬಾವನಿಗೆ ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಹಿಂಸಿಸುತ್ತಿದೆ. ಇದೀಗ ದಾಖಲಾಗಿರುವ ಚಾರ್ಜ್ಶೀಟ್ ಕೂಡ ಅದರ ಮುಂದುವರಿದ ಭಾಗವಾಗಿದೆ ಅಂದಿದ್ದಾರೆ. ರಾಬರ್ಟ್, ಪ್ರಿಯಾಂಕಾ ಮತ್ತು ಅವರ ಮಕ್ಕಳು ಮತ್ತೊಂದು ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಅಪಪ್ರಚಾರ, ಕಿರುಕುಳವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರೊಂದಿಗೆ ನಿಲ್ಲುತ್ತೇನೆ. ಸತ್ಯ ಎಂದಿಗೂ ಮೇಲುಗೈ ಸಾಧಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ