-ಬುಧವಾರ ಬೆಳಗಿನ ಜಾವ 3.3 & 4.0 ತೀವ್ರತೆಯಲ್ಲಿ ಕಂಪಿಸಿದ ಭೂಮಿ
ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ (Chamba) ಬುಧವಾರ (ಆ.20) ಬೆಳಗಿನ ಜಾವ 3.3 ಹಾಗೂ 4.0 ತೀವ್ರತೆಯಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶ (Himachal Pradesh) ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮೇಘಸ್ಫೋಟ ಸಂಭವಿಸುತ್ತಿದೆ. ಇದೀಗ ಅದರ ನಡುವೆಯೇ ಹಿಮಾಚಲ ಪ್ರದೇಶದ ಚಂಬಾದಲ್ಲಿ ಎರಡು ಭಾರಿ ಭೂಕಂಪನ ಉಂಟಾಗಿದೆ.ಇದನ್ನೂ ಓದಿ: ಡೆವಿಲ್ ಪ್ರಚಾರಕ್ಕೆ ಪುನರ್ ಚಾಲನೆ!
ರಾಷ್ಟ್ರೀಯ ಭೂಕಂಪನ ಕೇಂದ್ರದ ಮಾಹಿತಿ ಪ್ರಕಾರ, ಬುಧವಾರ ಬೆಳಗಿನ ಜಾವ 3:27ರ ಸುಮಾರಿಗೆ 3.3 ತೀವ್ರತೆ ಭೂಕಂಪನ ಸಂಭವಿಸಿದೆ. ಅದಾದ ಒಂದು ಗಂಟೆಯ ಬಳಿಕ 4:39ರ ಸುಮಾರಿಗೆ 4.0 ತ್ರೀವತೆಯಲ್ಲಿ ಭೂಮಿ ಕಂಪಿಸಿದೆ.
ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದ್ದು, ಕುಲ್ಲು ಜಿಲ್ಲೆಯ ಲಘಟಿ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟವು ತೀವ್ರ ವಿನಾಶಕ್ಕೆ ಕಾರಣವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಜೂ.20ರಿಂದ ಉಂಟಾದ ಮಳೆ ಸಂಬಂಧಿತ ಅವಘಡದಲ್ಲಿ 270ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 143 ಜನರು ಭೂಕುಸಿತ, ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟಗಳಿಂದ ಸಾವನ್ನಪ್ಪಿದ್ದರೆ, 133 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ಇನ್ನೂ ರಾಜ್ಯದಲ್ಲಿ ಅಂದಾಜು 2.21 ಲಕ್ಷ ರೂ. ಆರ್ಥಿಕ ನಷ್ಟವಾಗಿದ್ದು, 1,100ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಜೊತೆಗೆ 27,500ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ.ಇದನ್ನೂ ಓದಿ: ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ – 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆ