ಪ್ರತಿಭಾವಂತ ಕ್ರಿಕೆಟರ್ ಸಿದ್ಧಾರ್ಥ್ ಶರ್ಮಾ ನಿಧನ

Public TV
1 Min Read
Sidharth Sharma

ಶಿಮ್ಲಾ: ಹಿಮಾಚಲಪ್ರದೇಶ (Himachal Pradesh) ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ 28 ವರ್ಷದ ವೇಗಿ ಸಿದ್ಧಾರ್ಥ್ ಶರ್ಮಾ (Sidharth Sharma) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

Sidharth Sharma 1

ಹಿಮಾಚಲಪ್ರದೇಶ ತಂಡ ಗುಜರಾತ್ ಪರ ರಣಜಿ (Ranji) ಪಂದ್ಯವಾಡಲು ಪ್ರವಾಸದಲ್ಲಿತ್ತು. ಈ ವೇಳೆ ಸಿದ್ಧಾರ್ಥ್ ಶರ್ಮಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಗುಜರಾತ್‍ನ ವಡೋದರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ಬಳಿಕ 2 ವಾರಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.12 ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್‌ ವಿರುದ್ಧ ಗೆಲುವು

ಈ ಬಗ್ಗೆ ಹಿಮಾಚಲಪ್ರದೇಶ ರಾಜ್ಯ ಕ್ರಿಕೆಟ್‌ ಮಂಡಳಿ ಮಾಹಿತಿ ಹಂಚಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಾರ್ಥ್ ಮಧ್ಯರಾತ್ರಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕೆಲದಿನಗಳ ಹಿಂದೆ ಪಂದ್ಯಕ್ಕೂ ಮುನ್ನ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸಿಧ್ಧಾರ್ಥ್ ಶರ್ಮಾ 6 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 6 ಲಿಸ್ಟ್ A ಮತ್ತು ಒಂದು ಟಿ20 ಪಂದ್ಯವನ್ನಾಡಿ ಒಟ್ಟು 33 ವಿಕೆಟ್ ಪಡೆದಿದ್ದರು. 2022ರ ಡಿಸೆಂಬರ್‌ನಲ್ಲಿ ಬಂಗಾಳ ವಿರುದ್ಧ 69 ರನ್ ನೀಡಿ 5 ವಿಕೆಟ್ ಪಡೆದು ಸಿಧ್ಧಾರ್ಥ್ ಮಿಂಚಿದ್ದರು. ಇದನ್ನೂ ಓದಿ: ನಾನು ತಂಡದ ಜೊತೆಗಿನ ಕೊನೆಯ ಬಸ್ ಪ್ರಯಾಣವನ್ನು ಮಿಸ್ ಮಾಡಿಕೊಳ್ಳಲ್ಲ – 2019ರಲ್ಲೇ ಧೋನಿ ನಿವೃತ್ತಿ ಹೇಳಿದ್ದರು: ಆರ್.ಶ್ರೀಧರ್

ಸಿದ್ಧಾರ್ಥ್ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಈ ಬಗ್ಗೆ ಹಿಮಾಚಲಪ್ರದೇಶ ಸಿಎಂ ಸುಖವಿಂದರ್ ಸಿಂಗ್ (Sukhvinder Singh) ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *