ನವದೆಹಲಿ: ಗುಜರಾತ್ ಉಳಿಸಿಕೊಂಡು ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ನಿಂದ ತನ್ನ ತೆಕ್ಕೆಗೆ ಹಾಕುವ ಮೂಲಕ ಮೋದಿ ತನ್ನ ಸಮಾಜ್ರ್ಯವನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ.
2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ ಮೂರೇ ವರ್ಷದಲ್ಲಿ ಬಿಜೆಪಿ 12 ರಾಜ್ಯದಲ್ಲಿ ಗೆಲ್ಲುವ ಮೂಲಕ ಒಟ್ಟು 19 ರಾಜ್ಯದಲ್ಲಿ ಈಗ ಆಡಳಿತ ವಿಸ್ತರಣೆ ಮಾಡಿಕೊಂಡಿದೆ. ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡು ಈಗ ಕೇವಲ ಕರ್ನಾಟಕ, ಮಿಜೋರಾಂ, ಪಂಜಾಬ್, ಮೇಘಾಲಯದಲ್ಲಿ ಅಧಿಕಾರಲ್ಲಿದೆ.
Advertisement
ಕರ್ನಾಟಕ, ಮಿಜೋರಾಂ, ಮೇಘಾಲಯದಲ್ಲಿ ಮೋದಿ ಅಧಿಕಾರಕ್ಕೆ ಏರುವ ಮೊದಲೇ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ಪಂಜಾಬ್ ನಲ್ಲಿ 2012ರಲ್ಲಿ ಶೀರೋಮಣಿ ಅಖಾಲಿದಳ ಗೆದ್ದಿತ್ತು. ಆದರೆ ಈ ವರ್ಷ ಎನ್‍ಡಿಎ ಮೈತ್ರಿಕೂಟಕ್ಕೆ ಸೋಲಾಗಿದ್ದರಿಂದ ಕಾಂಗ್ರೆಸ್ ತೆಕ್ಕೆಗೆ ಪಂಜಾಬ್ ಸಿಕ್ಕಿದೆ. ಹೀಗಾಗಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಗುಜರಾತ್ ನಲ್ಲೂ ಸೋಲಾಗಲಿದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಆಗಿದೆ.
Advertisement
ಈ ವರ್ಷ ಉತ್ತರಪ್ರದೇಶದಲ್ಲಿ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಒಟ್ಟು 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿತ್ತು. ಇದರ ಜೊತೆ ಮಣಿಪುರ ಮತ್ತು ಗೋವಾದಲ್ಲೂ ಸರ್ಕಾರ ರಚನೆ ಮಾಡಿತ್ತು.
Advertisement
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ಬಳಿಕ ಬಿಜೆಪಿ, ಬಿಜೆಪಿ ಮೈತ್ರಿಕೂಟ ಇಲ್ಲದೇ ಇರುವುದು ಕೇವಲ 10 ರಾಜ್ಯಗಳು ಮಾತ್ರ. ಕರ್ನಾಟಕ(ಕಾಂಗ್ರೆಸ್), ತಮಿಳುನಾಡು(ಎಐಎಡಿಎಂಕೆ), ಕೇರಳ(ಸಿಪಿಐಎಂ), ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್), ಒಡಿಶಾ(ಬಿಜು ಜನತಾ ದಳ) ಮೇಘಾಲಯ(ಕಾಂಗ್ರೆಸ್), ತೆಲಂಗಾಣ(ತೆಲಂಗಾಣ ರಾಷ್ಟ್ರೀಯ ಸಮಿತಿ), ಮಿಜೋರಾಂ( ಕಾಂಗ್ರೆಸ್) ದೆಹಲಿ(ಆಮ್ ಆದ್ಮಿ ಪಾರ್ಟಿ), ತ್ರಿಪುರಾ(ಸಿಪಿಐ-ಎಂ)
Advertisement
ಆಂಧ್ರಪ್ರದೇಶವನ್ನು ಆಳುತ್ತಿರುವ ಟಿಡಿಪಿ ಮತ್ತು ನಾಗಾಲ್ಯಾಂಡ್ ನಲ್ಲಿರುವ ಎನ್‍ಪಿಎಫ್ ಎನ್‍ಡಿಎ ಸದಸ್ಯ ಪಕ್ಷವಾಗಿದೆ. ಬಿಹಾರ ಮತ್ತು ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿಕೂಟ ಆಡಳಿತದಲ್ಲಿದೆ. 2018ರಲ್ಲಿ ಕರ್ನಾಟಕ, ಮಿಜೋರಾಂ, ತ್ರಿಪುರ, ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಅರುಣಾಚಲ ಪ್ರದೇಶ್, ಅಸ್ಸಾಂ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಗೋವಾ, ಗುಜರಾತ್, ಜಾರ್ಖಂಡ್, ಜಮ್ಮುಮತ್ತು ಕಾಶ್ಮೀರ, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ.