ಶಿಮ್ಲಾ: ಖಾಸಗಿ ಬಸ್ಸೊಂದು ನದಿಯೊಳಗೆ ಬಿದ್ದ ಪರಿಣಾಮ 44 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಅಪಾಘತ ಹಿಮಾಚಲ ಪ್ರದೇಶದ ಚೋಪಲಾ ಎಂಬಲ್ಲಿ ನಡೆದಿದೆ.
ರಾಜಧಾನಿ ಶಿಮ್ಲಾದಿಂದ 95 ಕಿ.ಮೀ. ದೂರದಲ್ಲಿ ಟೋನ್ಸ್ ನದಿಗೆ ಬಸ್ ಬಿದ್ದಿದೆ. ಬಸ್‍ನಲ್ಲಿ ಒಟ್ಟು 52 ರಿಂದ 55 ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದುವರೆಗೂ 10 ಮಹಿಳೆಯರು, 31 ಪುರುಷರು ಹಾಗು 3 ಮಕ್ಕಳ ಮೃತ ದೇಹಗಳು ಪತ್ತೆಯಾಗಿವೆ. ಇನ್ನು ಒಂದೆರೆಡು ಶವಗಳು ನದಿಯಲ್ಲಿ ಹರಿದು ಹೋಗಿರಬಹುದು ಎಂದು ಶಂಕಿಸಲಾಗಿದೆ.
Advertisement
Advertisement
ಬಸ್‍ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ರಾಜ್ಯದವರು ಎಂದು ಹೇಳಲಾಗುತ್ತಿದೆ. ಯುಕೆ 66 ಪಿ 0045 ಎಂಬ ನಂಬರಿನ ಬಸ್ ಉತ್ತರಾಖಂಡ ರಾಜ್ಯದ ಟಿಯುನಿ ನಗರದಿಂದ ವಿಕಾಸ್‍ನಗರಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಟೋನ್ಸ್ ನದಿ ಯಮುನಾ ನದಿಯ ಅತಿದೊಡ್ಡ ಉಪನದಿಯಾಗಿದ್ದು, ಉತ್ತರಾಖಂಡದ ಗರ್ಹವಾಲ್ ಪ್ರದೇಶದಿಂದ ಹಿಮಾಚಲ ಪ್ರದೇಶದಲ್ಲಿ ಈ ನದಿ ಹರಿಯುತ್ತದೆ.
Advertisement