– 86,589 ಕೋಟಿ ರೂ. ಸಾಲದ ಹೊರೆ
ಶಿಮ್ಲಾ: ರಾಜ್ಯವು (ಹಿಮಾಚಲ ಪ್ರದೇಶ) ಆರ್ಥಿಕ ಬಿಕ್ಕಟ್ಟಿಗೆ (Himachal faces financial crisis) ಒಳಗಾಗಿರುವ ಕಾರಣ ಎಲ್ಲಾ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು (CPS) ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಗುರುವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.
Advertisement
ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ, ಮುಂದಿನ ದಿನಗಳಲ್ಲಿ ರಾಜ್ಯವು ಉತ್ತಮ ಸುಧಾರಣೆ ಕಾಣಬೇಕಿದೆ. ಆದ್ದರಿಂದ ಮುಂದಿನ 2 ತಿಂಗಳು ಯಾವುದೇ ಸಂಬಳ, ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಅಂತ ಸಂಪುಟದ ಎಲ್ಲಾ ಸದಸ್ಯರು ನಿರ್ಧಸಿರುವುದಾಗಿ ಸಿಎಂ ತಿಳಿಸಿದ್ದಾರೆ. ಅಲ್ಲದೇ ವೇತನ ಉಳಿತಾಯವು ಒಂದು ಸಣ್ಣ ಮೊತ್ತವಾಗಿದೆ. ಇದರ ಹೊರತಾಗಿ ಎಲ್ಲಾ ಶಾಸಕರು ಸಹ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದೂ ಸಹ ಅವರು ಮನವಿ ಮಾಡಿದ್ದಾರೆ.
Advertisement
Advertisement
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದು ಏಕೆ?
ಹಿಮಾಚಲ ಪ್ರದೇಶದಲ್ಲಿ ಸರ್ಕಾರದ ಅಸಮರ್ಪಕ ಆಡಳಿತವೇ ಕಾರಣ ಎಂದು ಹೇಳಲಾಗಿದೆ. ಹಳೆಯ ಪಿಂಚಣಿ ಯೋಜನೆ (OPS), ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಈ ಯೋಜನೆಗಳಿಂದಾಗಿ 86,589 ಕೋಟಿ ರೂ. ಸಾಲದ ಹೊರೆಯಾಗಿದೆ ಎಂದು ವರದಿಯಾಗಿದೆ.
Advertisement
ಹೌದು. ರಾಜ್ಯ ಸರ್ಕಾರವು ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಘೋಷಣೆ ಮಾಡಿದೆ. 5 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿದ್ದು, ಈ ಯೋಜನೆಗೆ ವಾರ್ಷಿಕ 800 ಕೋಟಿ ರೂ. ವೆಚ್ಚ ತಗುಲಲಿದೆ. ಇನ್ನೂ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಯಿಂದ ಪ್ರತಿವರ್ಷ ಸರ್ಕಾರಕ್ಕೆ 1,000 ಕೋಟಿ ರೂ., ರಾಜ್ಯ ಸರ್ಕಾರ ನೌಕರರ ವೇತನಕ್ಕೆ 20,639 ಕೋಟಿ ಹೊಡೆಯಾಲಿದೆ. ಇನ್ನೂ ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು, 2030-31ರ ವೇಳೆಗೆ ಇದು 2,38,827ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ವಾರ್ಷಿಕ ಪಿಂಚಣಿ ಹೊರೆ ಸುಮಾರು 20,000 ಕೋಟಿ ರೂ. ಹೆಚ್ಚಾಗಲಿದೆ ಎನ್ನಲಾಗಿದೆ.
ಇದರೊಂದಿಗೆ 680 ಕೋಟಿ ರೂ.ಗಳ ರಾಜೀವ್ ಗಾಂಧಿ ಸ್ವಯಂ ಉದ್ಯೋಗ ಪ್ರಾರಂಭ ಯೋಜನೆಯಡಿ ಇ-ಟ್ಯಾಕ್ಸಿ ಯೋಜನೆ ಆರಂಭಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬೊಕ್ಕಸ ಖಾಲಿಯಾಗುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜನಪ್ರತಿನಿಧಿಗಳೇ ಒತ್ತಾಯಿಸಿದೆ. ಹಾಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ತೆರಿಗೆದಾರರಿಗೆ ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದು, ಬಿಪಿಎಲ್, ಐಆರ್‌ಡಿಪಿ ಮತ್ತು ದುರ್ಬಲ ವರ್ಗದ ಜನರಿಗೆ ಮಾತ್ರ ಈ ಸಬ್ಸಿಡಿ ನಿಗದಿಪಡಿಸಿತು. 2023-24ರಲ್ಲಿ ವಿದ್ಯುತ್ ಹಣ ಪಾವತಿ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈಗಾಗಲೇ 86,589 ಕೋಟಿ ರೂ. ಸಾಲದ ಹೊರೆಯಲ್ಲಿ ಸಿಲುಕಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ 1 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಉಲ್ಲೇಖಿಸಿದ್ದಾರೆ.
ಇನ್ನೂ ಮಂತ್ರಿಗಳಿಗೆ ವೇತನ ಕಡಿತಗೊಳಿಸುವ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿವೆ.