ದಿಸ್ಪುರ್: ಭಾರತದ ಕ್ರೀಡಾಪಟು ಹಿಮಾದಾಸ್ ಅವರನ್ನು ರಾಜ್ಯಕ್ಕೆ ಮೊದಲ ಕ್ರೀಡಾ ರಾಯಭಾರಿ ಆಗಿ ಮುಖ್ಯಮಂತ್ರಿ ಸರಬಾನಂದ ಸೊನೋವಾಲ್ ರವರು ಆಯ್ಕೆ ಮಾಡಿದ್ದಾರೆ.
ಇತ್ತೀಚೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಈ ವೇಳೆ ಸಿಎಂ ಸೊನೋವಾಲ್ ರಾಜ್ಯದ ಕ್ರೀಡಾ ರಾಯಭಾರಿ ಎಂದು ಘೋಷಣೆಯನ್ನು ನೀಡಿದ್ದರು. ಇದೇ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಕ್ರೀಡಾ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ.
Advertisement
ಫ್ರಾನ್ಸ್ ನಲ್ಲಿ ಆಯೋಜಿಸಿದ ಮಹಿಳಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 18 ನೇ ವಯಸ್ಸಿನಲ್ಲಿಯೇ ಇತಿಹಾಸವನ್ನು ಸೃಷ್ಟಿಸುವಲ್ಲಿ ಹಿಮಾದಾಸ್ ಯಶಸ್ವಿಯಾದರು.
Advertisement
ಈ ಮುಂಚಿನ ಓಟದ ಹಿಮಾದಾಸ್ ರವರ ಸಾಧನೆಗೆ ಸಿಎಂ ಅಭಿನಂದಿಸಿದ್ದು, ಹಿಮಾದಾಸ್‍ರವರ ಸ್ಫೂರ್ತಿಯಿಂದ, ಅವಕಾಶಗಳಿಂದ ಮತ್ತು ಸಾಧನೆಗಳಿಂದ ಅಸ್ಸಾಂನ ಬೆಳವಣಿಗೆಗೆ ಪೂರಕವಾಗಲಿವೆ ಎಂದರು.
Advertisement
ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.