ನವದೆಹಲಿ: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(ಯುನಿಸೆಫ್) ಭಾರತದ ಪ್ರಪ್ರಥಮ ಯುವ ರಾಯಭಾರಿಯಾಗಿ ಓಟಗಾರ್ತಿ ಹಿಮದಾಸ್ ಆಯ್ಕೆಯಾಗಿದ್ದಾರೆ.
ಈ ಕುರಿತು ಬುಧವಾರ ಯುನಿಸೆಫ್‍ನ ತನ್ನ ಟ್ವಿಟ್ಟರ್ ಖಾತೆಯಲ್ಲಿ, ಇವರೇ ನಮ್ಮ ಭಾರತದ ಪ್ರಪ್ರಥಮ ಯುವ ರಾಯಭಾರಿಯೆಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ನವೆಂಬರ್ 14ರ ಮಕ್ಕಳ ದಿನಾಚರಣೆಯಂದೇ ಹಿಮದಾಸ್ ಅವರನ್ನು ಯೂತ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ವಿಶೇಷವಾಗಿದೆ.
Advertisement
Meet our Youth Ambassador, Hima Das!
The Asian Games medallist is @UNICEF India’s first ever youth ambassador as part of #WorldChildrensDay celebration.#GoBlue pic.twitter.com/4WYieI6MhB
— UNICEF India (@UNICEFIndia) November 14, 2018
Advertisement
ಈ ಕುರಿತು ತನ್ನ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಹಿಮದಾಸ್, ಯುನಿಸೆಫ್ ಇಂಡಿಯಾದ ಪ್ರಪ್ರಥಮ ಯುವ ರಾಯಭಾರಿಯಾಗಿ ನನ್ನನ್ನು ಗೌರವಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಮೂಲಕ ಅವರ ಕನಸುಗಳನ್ನು ನನಸಾಗುವಂತೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
Advertisement
I’m honoured and grateful to be the first @UNICEFIndia Youth Ambassador. I look forward to encouraging and supporting children to achieve their dreams. Join me and #GoBlue this #ChildrensDay pic.twitter.com/7gpgYCJQni
— Hima (mon jai) (@HimaDas8) November 14, 2018
Advertisement
ಜುಲೈ 12 ರಂದು ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವವನ್ನು ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇದಲ್ಲದೇ ಆಗಸ್ಟ್ 26ರಂದು ಇಂಡೋನೇಷ್ಯಾದಲ್ಲಿ ನಡೆದ 18 ನೇ ಏಷ್ಯನ್ ಗೇಮ್ಸ್‍ನ 400 ಮೀ ಓಟದ ಸ್ಫರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿದ್ದರು.
ಹಿಮದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು. ತನ್ನ ಮಿಂಚಿನ ಓಟದ ಮೂಲಕ ಭಾರತೀಯರ ಮನಸ್ಸು ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
https://www.facebook.com/AFIIndiaofficial/videos/1716978178421226/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews