ನವದೆಹಲಿ: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತಕ್ಕೆ ಮೊದಲನೇ ಬಾರಿ ಚಿನ್ನ ತಂದಕೊಟ್ಟ ಹಿಮಾದಾಸ್ ಅವರನ್ನು ಭಾರತೀಯರು ಅವರ ಪ್ರತಿಭೆಯನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ಅವರ ಜಾತಿಯನ್ನೇ ಹುಡುಕಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಜಯ ಪತಾಕೆಯನ್ನು ಹಾರಿಸಿದ ಹಿಮಾದಾಸ್ ರವರನ್ನು, ಜಾಲತಾಣಿಗರು ಹೆಚ್ಚಾಗಿ ಅವರ ಸಾಧನೆಯನ್ನು ಹುಡುಕದೇ, ಕೇವಲ ಅವರ ಜಾತಿಯನ್ನೇ ಹೆಚ್ಚಾಗಿ ಹುಡುಕಿದ್ದಾರೆ. ಇದನ್ನೂ ಓದಿ: ಹಿಂದೂ, ಮುಸ್ಲಿಂ ಎಂದು ಆಡುವುದನ್ನು ನಿಲ್ಲಿಸಿ – ಭಾರತೀಯರಿಗೆ ಹರ್ಭಜನ್ ಸಿಂಗ್ ಆಗ್ರಹ
Advertisement
ಗೂಗಲ್ ನಲ್ಲಿ ಯಾವುದೇ ವಿಚಾರವನ್ನು ಟೈಪ್ ಮಾಡಿದರೆ ಮೊದಲು ಅತಿ ಹೆಚ್ಚು ಸರ್ಚ್ ಆದ 10 ಟಾಪಿಕ್‍ಗಳ ಪಟ್ಟಿಯನ್ನು ತೋರಿಸುತ್ತದೆ. ಹೀಗಾಗಿ ಗೂಗಲ್ ನಲ್ಲಿ ಹಿಮಾದಾಸ್ ಎಂದು ಹುಡುಕಲು ಪ್ರಯತ್ನಸಿದರೇ, ಮೊದಲನೇ ಸ್ಥಾನದಲ್ಲೇ ಹಿಮಾ ದಾಸ್ ಜಾತಿ ಸರ್ಚ್ ಅನ್ನು ತೋರಿಸುತ್ತದೆ. ನಂತರ ಹಿಮಾ ದಾಸ್ ಅಥ್ಲೆಟ್ ಎಂಬುದು ಎರಡನೇ ಸ್ಥಾನದಲ್ಲಿ ತೋರಿಸುತ್ತದೆ.
Advertisement
How people searching for 'Hima Das Caste' on Google is everything that's wrong with our society. Fans were rejoicing and internet was going crazy with everybody showering praises. But guess what many people were searching for the most? Her life story? No! sadly It was her caste! pic.twitter.com/quXeCUF6RY
— Nandan Pratim Sharma Bordoloi (@NANDANPRATIM) July 15, 2018
Advertisement
ಹಿಮಾದಾಸ್ ರವರ ಜಾತಿ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ವಿಷಯವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Advertisement
ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ದೇಶದ ಮನೆಮಾತಾಗಿದ್ದಾರೆ.
ಭಾರತೀಯರು ಕ್ರೀಡಾಪಟುಗಳ ಜಾತಿಯನ್ನು ಹುಡುಕುವುದು ಇದೇ ಮೊದಲಲ್ಲ. ಈ ಹಿಂದೆ ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿವಿ ಸಿಂಧೂ ರವರ ಜಾತಿಯನ್ನು ಸಹ ಹುಡುಕಿದ್ದರು.
#HimaDas’s journey from rice fields of Assam to becoming a world champion fighting all adversities, Patriarchy, Poverty with determination serves as an inspiration. Yet, we never forget ‘CASTE’. #HimaDas’s caste is the most frequently searched thing about her on google. Shame. pic.twitter.com/dHH0pcnOAt
— Swati Singh (@itssinghswati) July 14, 2018