ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅವಾಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದ ಮೇಲೆ ಗುಡ್ಡದ ಮಣ್ಣು ಕುಸಿದಿದೆ.
ಮಡಿಕೇರಿಯಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ. ಅನೇಕ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬೊಲೆರೋದ ಮೇಲೆ ಏಕಾಏಕಿ ಗುಡ್ಡದ ಮಣ್ಣು ಕುಸಿದಿದೆ. ಸದ್ಯ ಈ ಅವಘಡದಿಂದ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಹೆದ್ದಾರಿಗೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ.
Advertisement
Advertisement
ಭಾರೀ ಮಳೆಗೆ ಹೊರ ಜಗತ್ತಿನ ಸಂಪರ್ಕವನ್ನು ಕೊಡಗು ಕಡಿತಗೊಂಡಿದೆ. ಕ್ಷಣ ಕ್ಷಣಕ್ಕೂ ಗುಡ್ಡಗಳು ಹೆದ್ದಾರಿ ಮೇಲೆ ಕುಸಿಯುತ್ತಿವೆ. ಇದರಿಂದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಇತ್ತ ಜೊತೆಗೆ ಮರ ಹಾಗೂ ಬರೆ ಕುಸಿತದಿಂದ ಸೋಮವಾರಪೇಟೆ-ಮಡಿಕೇರಿ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.
Advertisement
Advertisement
ಮಹಾಮಳೆ ಹಾರಂಗಿ ಜಲಾಶಯದಿಂದ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬೀಟ್ಟ ಪರಿಣಾಮ ಕುಶಾಲನಗರದ ಬಹುತೇಕ ಸಂಪೂರ್ಣ ಜಲಾವೃತವಾಗಿದೆ. ಕುವೆಂಪು, ಸಾಯಿ, ಕಾವೇರಿ ಮತ್ತು ಗಂಧದ ಕೋಟಿ ಬಡಾವಣೆಯ ಸೇರಿದಂತೆ ಸುಮಾರು 60 ಮನೆಗಳಿಗೆ ಜಲಾವೃತವಾಗಿದ್ದು, ಗಂಜಿಕೇಂದ್ರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಕೊಡಗಿಗೆ ರಕ್ಷಣಾ ತಂಡ ಬಂದಿದ್ದು, ಸುಮಾರು 30 ಜನರ ಎನ್‍ಡಿಆರ್ ಎಫ್ ತಂಡ ಬೋಟ್ ಗಳ ಮೂಲಕ ಜನರನ್ನು ರಕ್ಷಣೆ ಕಾರ್ಯಚರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv