ಕಾರವಾರ: ಕರಾವಳಿ ಭಾಗದಲ್ಲಿ ಸದ್ಯ ವರುಣನ ಆರ್ಭಟ ಜೋರಾಗಿದೆ. ಇದೇ ಬೆನ್ನಲ್ಲೆ ಭಾರೀ ಮಳೆಗೆ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿ ಮೇಲೆ ಗುಡ್ಡ ಕುಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಗುಡ್ಡದ ಪಕ್ಕ ಲಾರಿಯೊಂದನ್ನು ಚಾಲಕ ನಿಲ್ಲಿಸಿದ್ದನು. ಈ ವೇಳೆ ಮಳೆಯಿಂದ ಗುಡ್ಡ ಕುಸಿದು ಲಾರಿಯ ಮೇಲೆಯೇ ಬಿದ್ದಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಅಂಕೋಲಾ ತಾಲೂಕು ಆಸ್ಪತ್ರೆಗೆ ಆತನನ್ನು ಸ್ಥಳೀಯರು ರವಾನಿಸಿದ್ದಾರೆ.
Advertisement
Advertisement
ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಹುಬ್ಬಳ್ಳಿ -ಯಲ್ಲಾಪುರ ಹಾಗೂ ಅಂಕೋಲ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಭೇಟಿ ನೀಡಿದ್ದು, ರಸ್ತೆ ಸಂಚಾರ ಸುಗಮ ಮಾಡಿಕೊಡಲು ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.