ಚೆನ್ನೈ: ಪ್ಲಾಸ್ಟಿಕ್ ಕವರಿನಲ್ಲಿ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಬಂದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳ್ಳ ಮೊಬೈಲ್ ಅಂಗಡಿಯೊಂದರ ಬಾಗಿಲು ಮುರಿದು ಒಳಗೆ ಪ್ರವೇಸಿದ್ದು, ಆತನ ಚಲನವಲನವನ್ನು ಅಂಗಡಿಯ ಹೊರಗಿದ್ದ ಎರಡು ಸಿಸಿಟಿವಿ ಹಾಗೂ ಅಂಗಡಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕನ್ಯಾಕುಮಾರಿಯ ಕೊಲಾಛೆಲ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯಿಂದ 1 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
Advertisement
ಪ್ಲಾಸ್ಟಿಕ್ ಕವರಿನಲ್ಲಿ ಮುಖ ಮುಚ್ಚಿಕೊಂಡು ಬಂದ ಕದೀಮ, ಮೊದಲು ಅಕ್ಕ-ಪಕ್ಕದಲ್ಲಿ ಯಾರಾದರೂ ಇದ್ದಾರ ಎಂದು ನೋಡುತ್ತಾನೆ. ನಂತರ ಅಂಗಡಿ ಮುಂದೆ ಒಂದು ಬೈಕ್ ಬರುತ್ತಿರುವುದ್ದನ್ನು ಕಂಡು ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ನಂತರ ಅಂಗಡಿಯ ಬಾಗಿಲನ್ನು ಮುರಿದು, ಅಲ್ಲಿದ್ದ ಸಿಸಿಟಿವಿಯನ್ನು ಕಡಿತಗೊಳಿಸುತ್ತಾನೆ. ನಂತರ 1 ಲಕ್ಷ ರೂ. ಹಣವನ್ನು ದೋಚುತ್ತಾನೆ.
Advertisement
ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಆರೋಪಿಯ ಕೈ ಮೇಲೆ ಇದ್ದ ಟ್ಯಾಟೂ ಸೆರೆಯಾಗಿದ್ದು, ಈತನನ್ನು ಪತ್ತೆ ಮಾಡಲು ಪಾರದರ್ಶಕ ಪ್ಲಾಸ್ಟಿಕ್ ಕವರ್ ಸಹಕಾರಿಯಾಗಿದೆ. ನಂತರ ಅಂಗಡಿಯಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿದ ಮಾಲೀಕ ಸಚಿನ್ ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ದೃಶ್ಯವನ್ನ ನೋಡಿ ಹೊಟ್ಟೆಹುಣ್ಣಾಗುವರೆಗೂ ನಕ್ಕಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಕಳ್ಳ ತನ್ನ ಮುರ್ಖತನದಿಂದ ಮಾಡಿಕೊಂಡ ಎಡವಟ್ಟಿನಿಂದ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.