ಕಳೆದ ಕೆಲ ದಿನಗಳಿಂದ ಟ್ವಿಟ್ಟರ್ ನಲ್ಲಿ ವಿಚಿತ್ರ ರೆಸಿಪಿಗಳನ್ನು ನೆಟ್ಟಿಗರು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಿತ್ರ ರೆಸಿಪಿಗಳನ್ನು ನೋಡಿದ್ರೆ ಅರೇ, ಇಷ್ಟೆನಾ ಇದು ನಾವು ಮಾಡ್ತೀವಿ ಎಂದು ಚಿಕ್ಕ ಮಕ್ಕಳು ಹೇಳುತ್ತಾರೆ. ಅಂತಹ ರೆಸಿಪಿಗಳೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
follow me for more recipes pic.twitter.com/z7Eu91BYby
— meinhard (@meinharrd) January 27, 2020
Advertisement
ಅಡುಗೆ ಮಡೋದು ಸಹ ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸಲ್ಲ. ಇಂದು ಇಂಟರ್ ನೆಟ್ ನಲ್ಲಿ ಮನೆ ಅಡುಗೆಯಿಂದ ವಿದೇಶಗಳ ರೆಸಿಪಿಗಳು ಸಿಗುತ್ತವೆ. ಇಂತಹ ರೆಸಿಪಿಗಳ ನಡುವೆ ಈ ವಿಚಿತ್ರ ಅಡುಗೆ ಟಿಪ್ಸ್ ಗಳು ಸದ್ದು ಮಾಡುತ್ತಿವೆ. ಕೆಲವರು ಬಾಳೆಹಣ್ಣಿನ ಸಿಪ್ಪೆ ತೆಗೆದು ಪ್ಲೇಟ್ ನಲ್ಲಿರಿಸಿ, ಇದೇ ರೀತಿಯ ಟಿಪ್ಸ್ ಗಳಿಗಾಗಿ ನಮ್ಮನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ.
Advertisement
https://twitter.com/teriinext/status/1221037564288696320
Advertisement
ಮತ್ತೋರ್ವ ಟ್ವಿಟ್ಟರ್ ಬಳಕೆದಾರ, ದಾಳಿಂಬೆ ಕಾಳುಗಳನ್ನು ಬಿಡಿಸಿ ತಟ್ಟೆಯಲ್ಲಿರಿಸಿದ್ದಾರೆ. ಇನ್ನೊಬ್ಬರು ಬ್ರೆಡ್‍ಗೆ ಜಾಮ್ ಹಚ್ಚಿ ಫೋಟೋ ಹಂಚಿಕೊಂಡಿದ್ದಾರೆ. ಇದೇ ರೀತಿ ಜ್ಯೂಸ್ ಗ್ಲಾಸ್‍ಗೆ ತುಂಬಿಸೋದು, ಮೊಟ್ಟೆಯನ್ನು ಕುದಿಸೋದು, ಕಡಲೆಬೀಜವನ್ನು ಕಾಯಿಯಿಂದ ಬೇರ್ಪಡಿಸೋದು, ರೆಡಿ ಮಾಡಿದ ಬಜ್ಜಿ ತಿಂದು ಖಾಲಿ ಮಾಡೋದನ್ನು ಸಹ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Advertisement
For more recipes, follow me! pic.twitter.com/Ag341cejyz
— Apoorv Sharma (@oyeapprove) January 24, 2020
ಸದ್ಯ ಟ್ವಿಟ್ಟರ್ ನಲ್ಲಿ ಈ ರೀತಿಯ ರೆಸಿಪಿಗಳು ಕಾರುಬಾರು ಜೋರಾಗಿಯೇ ನಡೆಯುತ್ತಿದೆ. ನೆಟ್ಟಿಗರು ತಮಗೆ ತೋಚಿದ ಸಣ್ಣ ಸಣ್ಣ ಅಡುಗೆ ಕೆಲಸಗಳನ್ನು ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
https://twitter.com/regal_kingg/status/1220180952585891840