ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಯವರು(Sugar Factory) ಪ್ರತಿ ಟನ್‍ಗೆ 3,600 ರೂ. ಕನಿಷ್ಠ ಬೆಂಬಲ ಬೆಲೆ(MSP) ನಿಗದಿ ಮಾಡಿ 15 ದಿನಗಳೊಳಗಾಗಿ ಕಬ್ಬು ಕ್ರಷಿಂಗ್ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಎಲ್ಲ ಸೇರಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್ ಹಾಗೂ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸನೂರ ಸಕ್ಕರೆ ಕಾರ್ಖಾನೆ ಬಂದ್ ಆಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಸಣ್ಣ ಹಾಗೂ ದೊಡ್ಡ ರೈತರ ಜಮೀನಿನಲ್ಲಿ ಕಬ್ಬು ಈಗಾಗಲೇ ಬೆಳೆ ಬೆಳೆದು ನಿಂತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಬ್ಬು ಬೆಳೆದು ನಿಂತಿದೆ. ಇದಕ್ಕಾಗಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,400 ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರಿಗೆ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆ ಪೋಷಣೆ ಹಾಗೂ ಶಾಲಾ ಶುಲ್ಕ ಹೀಗೆ ಇನ್ನಿತರ ಖರ್ಚುಗಳನ್ನು ಸರಿದೂಗಿಸಲು ಆಗುವುದಿಲ್ಲ. ಹೀಗಾಗಿ ಕೂಡಲೇ ಎಂಎಸ್‍ಪಿ ಬೆಲೆಯನ್ನು 3,600 ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಜಿಎಫ್ ಮ್ಯೂಸಿಕ್ ಬಳಕೆ – ಕಾಂಗ್ರೆಸ್ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡುವಂತೆ ಕೋರ್ಟ್ ಆದೇಶ
Advertisement
Advertisement
ಈಗ ರೇಣುಕಾ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,700 ರೂ. ದರ ನೀಡುತ್ತಿದ್ದು, ಆದರೆ ಭೂಸನೂರ ಸಕ್ಕರೆ ಕಾರ್ಖಾನೆಯವರು 3,600 ರೂ. ಎಎಸ್‍ಪಿ ನಿಗದಿ ಮಾಡಿ ಪ್ರಾರಂಭಿಸಬೇಕು. ಈಗಾಗಲೇ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಸಿಯಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ತೊಗರಿ, ಸೋಯಾಬಿನ್, ಹೆಸರು, ಉದ್ದು ನಾಶವಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.
Advertisement
ಪ್ರಮುಖರಾದ ಉಮಾಪತಿ ಪಾಟೀಲ್, ವಿಜಯಕುಮಾರ ಹತ್ತರಕಿ, ಮಂಜು ಸಿ.ಕೆ., ರಮೆಶ ರಾಗಿ, ಸುನಿಲ್ ಕುಮಾರ ಮಠಪತಿ, ಶರಣಯ್ಯ ಸ್ವಾಮಿ ಮಠ, ಸಿದ್ದು ವೇದಶೆಟ್ಟಿ ಇತರರಿದ್ದರು.