ಚೆನ್ನೈ: ಶಾಲಾ-ಕಾಲೇಜುಗಳು ಧರ್ಮ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ. ಅಲ್ಲಿ ನೀವು ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಹಿಜಬ್-ಕೇಸರಿ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ನಟಿ ಖುಷ್ಬೂ ಕಿಡಿಕಾರಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?:
ಶಿಕ್ಷಣಕ್ಕೆ ಧರ್ಮವಿಲ್ಲ ಅದು ಸಮಾನತೆಯ ಆಲಯ. ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸುತ್ತಿದ್ದೆ. ಆಗ ಎಲ್ಲರಿಗೂ ರೂಲ್ಸ್ ಒಂದೇ ಆಗಿತ್ತು. ಸಮಾನತೆ ಇತ್ತು. ಆದರೆ ಇದೀಗ ಶಾಲಾ-ಕಾಲೇಜಿನಲ್ಲಿ ಧರ್ಮದ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದನ್ನೂ ಓದಿ: ಹಿಜಬ್-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ
Advertisement
Advertisement
ನಾನು ಶಾಲೆಗೆ ಹೋಗುವಾಗ ಯಾರೂ ಕೂಡ ಯಾವುದನ್ನು ಧರಿಸಕೊಂಡು ಬರುವುದನ್ನು ನೋಡಿಲ್ಲ. ಆದರೆ ಸಮವಸ್ತ್ರ ಮಾತ್ರ ಕಡ್ಡಾಯವಾಗಿತ್ತು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಆದರೆ ಇದೀಗ ಈ ಗೊಂದಲ ಯಾಕೆ?. ಸರಸ್ವತಿ ಜ್ಞಾನದ ಸಂಕೇತ ಕೆಲ ಕಿಡಿಗೇಡಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಬರುವುದು ತಪ್ಪು.
Advertisement
Our children are our pride, irrespective of which religion they belong to. Why is the opposition hellbent on creating a rift between them? You cannot clap with one hand. Let us shake hands to secure their future n not pin them up against each other. Everything cannot be politics.
— KhushbuSundar (@khushsundar) February 9, 2022
ಶಿಕ್ಷಣದಲ್ಲಿ ಸಮಾನತೆ, ಶಿಸ್ತು, ಜ್ಞಾನವನ್ನು ವೃದ್ಧಿಸುವ ಸ್ಥಳ ಶಾಲಾ-ಕಾಲೇಜು ಇಲ್ಲಿ ಧರ್ಮದ ಆಚರಣೆಗೆ ಮುಂದಾಗಬೇಡಿ. ನಿಮ್ಮ ಧರ್ಮದ ಆಚರಣೆಯನ್ನು ನಿಮ್ಮ ಇಚ್ಛೆಯ ಪ್ರಕಾರ ಇತರ ಸ್ಥಳಗಲ್ಲಿ ಆಚರಿಸಿ. ಶಿಕ್ಷಣದ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್