ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

Public TV
1 Min Read
madras high court

ಚೆನ್ನೈ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಬ್-ಕೇಸರಿ ಶಾಲು ವಿವಾದವು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಧಾರ್ಮಿಕ ಪ್ರಕರರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ರಾಷ್ಟ್ರವೋ ಅಥವಾ ಧರ್ಮವೋ, ಯಾವುದು ಮುಖ್ಯ ಎಂದು ಪ್ರಶ್ನಿಸಿದೆ.

ದೇವಾಲಯಗಳಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ಭಂಡಾರಿ ಮತ್ತು ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರಿದ್ದ ಪೀಠವು, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕೆಲವರು ಹಿಜಬ್‌ಗಾಗಿ ಹೋಗುತ್ತಾರೆ. ಮತ್ತೆ ಕೆಲವರು ಟೋಪಿಗಾಗಿ ಹೋರಾಡುತ್ತಾರೆ. ಇನ್ನೂ ಕೆಲವರು ತಮಗೆ ಅಗತ್ಯವಿರುವುದಕ್ಕಾಗಿ ಪ್ರತಿಭಟಿಸುತ್ತಾರೆ. ಇದು ಒಂದು ರಾಷ್ಟ್ರವೋ ಅಥವಾ ಧರ್ಮದಿಂದ ವಿಭಜನೆಯಾಗಿದೆಯೋ ಅಥವಾ ಬೇರೆ ಇನ್ಯಾವುದೋ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

SHIVAMOGGA COLLEGE KEASRI HIJAB 2

ಭಾರತ ಜಾತ್ಯತೀತ ರಾಷ್ಟ್ರ. ಪ್ರಚಲಿತ ವಿದ್ಯಾಮಾನಗಳಿಂದ ಕಂಡು ಬರುತ್ತಿರುವುದು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಭಂಡಾರಿ ಕಟು ಪದಗಳಿಂದ ಧರ್ಮದ ಹೆಸರಿನಲ್ಲಿ ದೇಶ ಒಡೆಯುವವರ ವಿರುದ್ಧ ಚಾಟಿ ಬೀಸಿದ್ದಾರೆ.

ತಿರುಚಿರಪಳ್ಳಿ ಜಿಲ್ಲೆಯ ರಂಗರಾಜನ್ ನರಸಿಂಹನ್ ಎಂಬವರು ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭಕ್ತರಿಗೆ ವಸ್ತ್ರ ಸಂಹಿತೆ ರೂಪಿಸಬೇಕು. ರಾಜ್ಯಾದ್ಯಂತ ಇರುವ ದೇವಾಲಯಗಳಿಗೆ ಹಿಂದೂಯೇತರರು ಕಾಲಿಡದಂತೆ ಮತ್ತು ದೇವಸ್ಥಾನಗಳ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

SMG HIJAB PROTEST 1

ಈ ಅರ್ಜಿ ವಿಚಾರಣೆ ನಡೆಸಿದ ಪೀಠವು, ಮನವಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನೀಡುವಂತೆ ಅರ್ಜಿದಾರನನ್ನು ಪ್ರಶ್ನಿಸಿದೆ. ಆಗಮಗಳ ಯಾವ ಭಾಗವು ಪ್ಯಾಂಟ್, ಧೋತಿ ಮತ್ತು ಶರ್ಟ್‌ಗಳ ಕುರಿತು ಉಲ್ಲೇಖ ಮಾಡಿದೆ ಎಂದು ಪೀಠ ಕೇಳಿದೆ. ಅಂತಿಮವಾಗಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ವಿವರಣೆಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಪೀಠ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *