ಬೆಳಗಾವಿ: ಹಿಜಬ್, ಹಿಜಬ್ ಅಂತಾ ಏನ್ ಹೇಳ್ತಿದಿಯಾ ಆಜಾದಿ ಬೇಕಾ ನಿಮಗೆ?. ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ?, ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ ಎಂದು ಹಿಜಾಬ್ ಪರ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಂದಾರ್ಗೆ ಜೀವ ಬೆದರಿಕೆ ಬಂದಿದ್ದು ಈ ಸಂಬಂಧ ದೂರು ದಾಖಲಾಗಿದೆ.
Advertisement
ಬೆಳಗಾವಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಹಿಜಬ್ ಪರ ಹೋರಾಟ ಮಾಡಿದ ಸೀಮಾ ಇನಾಂದಾರ್ಗೆ ಅಪರಿಚಿತ ನಂಬರ್ನಿಂದ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಬಂದಿರುವುದಾಗಿ ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು
Advertisement
Advertisement
ಸೀಮಾ ಇನಾಂದಾರ್ ಮೊಬೈಲ್ಗೆ ವಾಟ್ಸಪ್ ಕರೆ ಮಾಡಿರುವ ಕಿಡಿಗೇಡಿ, ಹಿಜಬ್, ಹಿಜಬ್ ಅಂತಾ ಏನ್ ಹೇಳ್ತಿದಿಯಾ ಆಜಾದಿ ಬೇಕಾ ನಿಮಗೆ?, ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೆ ಅಲ್ಲದೆ ಅವಾಚ್ಯ ಶಬ್ದಗಳಿಂದ ಹಿಂದಿ ಭಾಷೆಯಲ್ಲಿ ನಿಂದಿಸಿದ್ದಾನೆ. ಜೀವ ಬೆದರಿಕೆ ಹಾಕಿದ ಆಡೀಯೋ ಬೇರೆ ಮೊಬೈಲ್ನಿಂದ ರೆಕಾರ್ಡ್ ಮಾಡಿಕೊಂಡ ಸೀಮಾ ಇನಾಂದಾರ್ ಈ ಬಗ್ಗೆ ಇದೀಗ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
Advertisement
ಕೆಲ ದಿನಗಳ ಹಿಂದೆ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢಶಾಲೆ ಬಳಿ ಬಂದು ಹಿಜಬ್ ಹಾಕುವ ವಿಚಾರವಾಗಿ ಶಾಲಾ ಸಿಬ್ಬಂದಿ, ಮತ್ತು ಪೊಲೀಸರ ಜೊತೆ ಸೀಮಾ ಇನಾಂದಾರ್ ವಾಗ್ವಾದ ಸಹ ನಡೆಸಿದ್ದರು. ಅಲ್ಲದೇ ಹಿಜಬ್ ಪರ ಪ್ರತಿಭಟನೆಯಲ್ಲಿ ಕೂಡ ಭಾಗವಹಿಸಿದ್ದರು.