ಉಡುಪಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ. ಕಾಲೇಜು ಪ್ರಾರಂಭಿಸಲು ಎಲ್ಲರೂ ಸಹಕರಿಸೋಣ. ನಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ ಎಂದು ಉಡುಪಿ ಶಾಸಕ ರಘುಪತಿ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಹಿಜಬ್ ವಿಚಾರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ನಾವು ಏನೇ ಇದ್ದರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ನೀಡೋಣ ಸರ್ಕಾರ ನಾಳೆಯಿಂದ ತರಗತಿಗಳನ್ನು ಪ್ರಾರಂಭಿಸಲಿ ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್ – ಹೈಕೋರ್ಟ್ ಕಲಾಪದ ಪೂರ್ಣ ಪಾಠ ಇಲ್ಲಿದೆ
ಕೇಸರಿ ಶಾಲನ್ನು ಯಾರೂ ಹಾಕಬೇಡಿ. ಹಿಜಬ್ ಅನ್ನು ತರಗತಿ ಒಳಗೆ ಹಾಕಬೇಡಿ ಎಂದು ರಘುಪತಿ ಭಟ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದು, ತಕ್ಷಣವೇ ತರಗತಿಗಳನ್ನು ಪ್ರಾರಂಭಿಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ 10ನೇ ತರಗತಿ ವರೆಗೆ ಶಾಲೆ ಆರಂಭ – ಸದ್ಯಕ್ಕಿಲ್ಲ ಪಿಯುಸಿ, ಡಿಗ್ರಿ ಕಾಲೇಜ್
ಕೋರ್ಟ್ ಉತ್ತಮ ಆದೇಶ ನೀಡಿದೆ. ಅದನ್ನು ಎಲ್ಲರೂ ಪಾಲಿಸೋಣ. ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಆದೇಶ ನೀಡಿದೆ. ಮುಂದಿನ ಒಂದು ತಿಂಗಳಿನಲ್ಲಿ ಪರೀಕ್ಷೆ ಪ್ರಾರಂಭವಾಗಲಿದೆ. ಇನ್ನೂ ಹೆಚ್ಚು ರಜೆ ನೀಡಿದರೆ ಮಕ್ಕಳ ಭವಿಷ್ಯ ಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.