ಹಾಸನ: ಹಿಜಬ್ ವಿವಾದದ ಹಿನ್ನೆಲೆಯಲ್ಲಿ ಎಸ್‍ಡಿಎಮ್‍ಸಿ ಅಧ್ಯಕ್ಷರು ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಪೋಷಕರು ಮಕ್ಕಳ ಹಿಜಬ್ ತೆಗೆಸಲು ಒಪ್ಪಿಗೆ ನೀಡಿದ್ದಾರೆ.
ಬೇಲೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪೋಷಕರೊಂದಿನ ಸಭೆ ನಡೆಸಿದಾಗ ನಮ್ಮ ಮಕ್ಕಳು ಹಿಜಬ್ ತೆಗೆಯಲು ಒಪ್ಪಿರಲಿಲ್ಲ. ಆದರೆ ನಾವು ಮಕ್ಕಳಿಗೆ ಬುರ್ಕಾ-ಹಿಜಬ್ ತೆಗೆಯುವಂತೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‍ಗೆ ಅವಕಾಶ ನೀಡಿ – ಪ್ರತಿಭಟಿಸುತ್ತಿದ್ದ 58 ವಿದ್ಯಾರ್ಥಿಗಳು ಸಸ್ಪೆಂಡ್!
ಹಿಜಬ್ ತೆಗೆಯದ ಕಾರಣ ನಮ್ಮ ಮಕ್ಕಳನ್ನು ಶಾಲೆಯ ಹೊರಗಡೆ ನಿಲ್ಲಿಸಲಾಗುತ್ತಿತ್ತು. ಇದರಿಂದ ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿತ್ತು. ಹೀಗಾಗಿ ನಾವು ಮಕ್ಕಳಿಗೆ ಹಿಜಬ್ ತೆಗೆಯುವಂತೆ ಹೇಳಿ ಒಪ್ಪಿಸಿದ್ದೇವೆ. ಆದರೆ ವೇಲ್ ಮಾತ್ರ ತೆಗೆಸುವುದಿಲ್ಲ. ನಮ್ಮ ಮಕ್ಕಳಿಗೆ ವೇಲ್ ಹಾಕಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು: ರಾಜವಂಶಸ್ಥ ಯದುವೀರ್
ವಿದ್ಯಾರ್ಥಿನಿಯರು ಕಳೆದ 3 ದಿನಗಳಿಂದ ಹಿಜಬ್ ತೆಗೆಯುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು.