ಬೆಂಗಳೂರು: ಕೋರ್ಟ್ ಕಟಕಟೆಯಲ್ಲಿರುವ ಹಿಜಬ್ ಸಂಘರ್ಷಕ್ಕೆ ಅಂತ್ಯ ಹಾಡಲು ಸರ್ಕಾರದ ಪ್ಲಾನ್ ಮಾಡಿದೆ. ಹೈಕೋರ್ಟ್ ತೀರ್ಪು ನೋಡಿಕೊಂಡು ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಶಾಲಾ-ಕಾಲೇಜುಗಳಲ್ಲಿ ಧರ್ಮಯುದ್ಧಕ್ಕೆ ಅವಕಾಶ ಕೊಡದಿರಲು ಸಮವಸ್ತ್ರ ನೀತಿ ಕುರಿತು ಹೊಸ ನಿಯಮ ಜಾರಿಗೆ ಸರ್ಕಾರದ ಚಿಂತನೆ ನಡೆಸಿದೆ.
Advertisement
Advertisement
ಏನು ನಿಯಮ?
ಏಕರೂಪ ಸಮವಸ್ತ್ರ ನಿಯಮದ ಬಗ್ಗೆ ವಿಶೇಷ ಕಾನೂನು ಜಾರಿಗೆ ತರಲು ಈಗಿರುವ ಕರ್ನಾಟಕ ಶಿಕ್ಷಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಮುಂದಾಗಿದೆ.
Advertisement
ಸಮವಸ್ತ್ರ ಧರಿಸದಿದ್ದರೆ ಈಗಿರುವ ಕಾಯ್ದೆಯಲ್ಲಿ ಯಾವುದೇ ಕ್ರಮಕ್ಕೆ ಅವಕಾಶ ಇಲ್ಲ. ಹೀಗಾಗಿ ತಿದ್ದುಪಡಿ ಕಾಯ್ದೆಯಲ್ಲಿ ಕ್ರಮದ ಬಗ್ಗೆ ಉಲ್ಲೇಖ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ನಿಯಮ ಮೀರಿದ್ರೆ ಕ್ರಮ ತೆಗೆದುಕೊಳ್ಳಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ನಾಯಿಗೆ ಇರುವ ನಿಷ್ಠೆ ಸಿ.ಎಂ.ಇಬ್ರಾಹಿಂಗೆ ಇಲ್ಲ: ವಿ.ಎಸ್.ಉಗ್ರಪ್ಪ
Advertisement
ಶಾಲಾ-ಕಾಲೇಜುಗಳಿಗೆ ದಾಖಲಾತಿ ವೇಳೆಯೇ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತದೆ. ಶಿಕ್ಷಣ ಇಲಾಖೆ ನಿಯಮ ಪಾಲಿಸುತ್ತೇವೆ, ಇಲ್ಲದಿದ್ದರೆ ಕ್ರಮ ಕೈಗೊಳ್ಳಬಹುದು ಎಂದು ಮುಚ್ಚಳಿಕೆ ಪತ್ರಕ್ಕೆ ವಿದ್ಯಾರ್ಥಿಗಳು ಸಹಿ ಹಾಕಬೇಕಾಗುತ್ತದೆ. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್
ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಭಾವನೆಗಳ ಪರ, ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿ ಆಗಲ್ಲ. ಶೈಕ್ಷಣಿಕ ಚಟುವಟಿಕೆಗಳು ಬಿಟ್ಟು ಇನ್ಯಾವುದೇ ಅನ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ವಿದ್ಯಾರ್ಥಿಗಳ ಜೊತೆ ಪೋಷಕರಿಂದಲೂ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.