ಕಲಬುರಗಿ: ನಾವು ವಿದ್ಯಾರ್ಥಿನಿಯರಿಗೆ ಸರ್ಕಾರದ ಆದೇಶದ ಬಗ್ಗೆ ಮೊದಲೇ ತಿಳಿಸಿದ್ದೆವು. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಳ್ಳಿಯಿಂದ ಬರುತ್ತಾರೆ. ಅವರಿಗೆ ನಿಯಮಗಳ ಬಗ್ಗೆ ಹೆಚ್ಚಾಗಿ ತಿಳಿದಿರದ ಕಾರಣ ಹಿಜಬ್ ಧರಿಸಿಯೇ ಶಾಲೆಯ ಆವರಣ ಪ್ರವೇಶಿಸಿದ್ದಾರೆ ಎಂದು ಕಲಬುರಗಿ ನಗರದ ಉರ್ದು ಶಾಲೆಯ ಶಿಕ್ಷಕ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಿಕ್ಷಕ, ಈ ವಿದ್ಯಾ ಸಂಸ್ಥೆಗೆ ಬರುವ ಎಲ್ಲಾ ವಿದ್ಯಾರ್ಥಿನಿಯರೂ ಮುಸ್ಲಿಂ ಸಮುದಾಯದವರು. ನಾವು 2-3 ದಿನಗಳ ಹಿಂದೆಯೇ ಸರ್ಕಾರದ ಆದೇಶದ ಬಗ್ಗೆ ಅವರಿಗೆ ಸೂಚನೆ ನೀಡಿದ್ದೆವು. ಅವರು ತರಗತಿ ಸಮಯಕ್ಕಿಂತ ಮೊದಲೇ ಶಾಲಾ ಆವರಣ ಪ್ರವೇಶಿಸಿದ್ದರಿಂದ ಇಂದು ಎಚ್ಚರಿಕೆ ನೀಡುವಲ್ಲಿ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು
ಕಲಬುರಗಿಯ ಉರ್ದು ಶಾಲೆ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಸರ್ಕಾರದ ನಿಯಮ ಉಲ್ಲಂಘಿಸಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಕಾಲೇಜು ಹಾಗೂ ಶಾಲೆಯ ಆವರಣ ಪ್ರವೇಶಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಶಿಕ್ಷಕರು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿ ಹಿಜಬ್ ತೆಗೆಸಿರುವ ಘಟನೆಗಳು ಹಲವೆಡೆ ವರದಿಯಾಗಿವೆ. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್ ಶಾಸಕಿ