ಮಂಗಳೂರು: ಕರಾವಳಿಯಿಂದ ಆರಂಭವಾಗಿದ್ದ ಹಿಜಬ್ ವಿವಾದ ಕೆಳ ತಿಂಗಳಿನಿಂದ ತಣ್ಣಗಾಗಿತ್ತು. ಆದ್ರೆ ಇದೀಗ ವಿವಾದಿತ ಹಿಜಬ್ ವಿದ್ಯಾರ್ಥಿನಿಯರ ಮೂಲಕವೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆ ಮಂಗಳೂರಿನಲ್ಲಿ ಗರ್ಲ್ಸ್ ಕಾನ್ಫರೆನ್ಸ್ ಎಂಬ ಕಾರ್ಯಕ್ರಮ ನಡೆಸಿ ಮತ್ತೆ ಕಿಚ್ಚು ಹಚ್ಚಿದೆ.
Advertisement
ಕೆಲ ತಿಂಗಳ ಹಿಂದೆ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದ ಹಿಜಬ್ ವಿವಾದ ತಣ್ಣಗಾಗಿದೆ. ಆದ್ರೆ ಇದೀಗ ಹಿಜಬ್ ವಿವಾದ ಆರಂಭವಾದ ಕರಾವಳಿಯಿಂದಲೇ ಮತ್ತೆ ಹಿಜಬ್ ಕಿಚ್ಚು ಹೊತ್ತಿಕೊಂಡಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ವಿವಾದಿತ ಹಿಜಬ್ ವಿದ್ಯಾರ್ಥಿನಿಯರ ಮೂಲಕ ಗರ್ಲ್ಸ್ ಕಾನ್ಫರೆನ್ಸ್ ಎಂಬ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿ ನಡೆಸಿದೆ. ಕಾರ್ಯಕ್ರಮಕ್ಕೂ ಮುನ್ನ ನಗರದ ಜ್ಯೋತಿ ಸರ್ಕಲ್ ನಿಂದ ಪುರಭವನವರೆಗೆ ರ‍್ಯಾಲಿ ನಡೆಸುವ ಯೋಜನೆಯನ್ನು ಸಿ.ಎಫ್.ಐ ಮಾಡಿತ್ತು. ಆದ್ರೆ ರಾಜ್ಯದಲ್ಲಿ ನಡೆದ ಒಂದಷ್ಟು ಬೆಳವಣಿಗೆಯ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ರ‍್ಯಾಲಿಗೆ ಅನುಮತಿ ನೀಡಿರಲಿಲ್ಲ. ಹೀಗಿದ್ದರೂ ನಗರದ ಮಿಲಾಗ್ರಿಸ್ ಪಕ್ಕದ ಮಸೀದಿ ಬಳಿ ಸಿ.ಎಫ್.ಐ ಕಾರ್ಯಕರ್ತರು ಜಮಾವಣೆಯಾಗಿದ್ದರು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮೆರವಣಿಗೆ ಮಾಡುವಂತಿಲ್ಲ, ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಸಿ.ಎಫ್.ಐ ಕಾರ್ಯಕರ್ತರಿಗೆ ನೀಡಿದ್ರು. ಕಮಿಷನರ್ ಎಚ್ಚರಿಕೆ ಬಳಿಕ ಮೆರವಣಿಗೆ ಮಾಡದೇ ಕಾರ್ಯಕರ್ತರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿದರು. ಇದನ್ನೂ ಓದಿ: ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್
Advertisement
Advertisement
ಸಿ.ಎಫ್.ಐ ಆಯೋಜಿಸಿದ ಗರ್ಲ್ಸ್ ಕಾನ್ಫರೆನ್ಸ್‌ನಲ್ಲಿ ಉಡುಪಿ ದಕ್ಷಿಣಕನ್ನಡ ಕಾಲೇಜಿನ ವಿವಾದಿತ ಹಿಜಬ್ ವಿದ್ಯಾರ್ಥಿನಿಯರು ವೇದಿಕೆಯಲ್ಲಿ ಹಾಜರಿದ್ದರು. ನಮ್ಮ ಹಿಜಬ್ ಹಕ್ಕನ್ನು ಪಡೆದೇ ತೀರುತ್ತೆವೆ ಎಂಬ ಘೋಷಣೆ ಮೊಳಗಿಸಿದರು. ಹಿಜಬ್ ವಿವಾದ ಬಗ್ಗೆಯೆ ಹಿಜಬ್ ಹೆಸರಿನಲ್ಲೇ ಮುದ್ರಿತ ಪುಸ್ತಕವೊಂದನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಸಿ.ಎಫ್.ಐ ರಾಷ್ಟ್ರಾಧ್ಯಕ್ಷ ಎಂ.ಎಸ್ ಸಾಜೀದ್ ಹಿಜಬ್ ಹೋರಾಟದಲ್ಲಿ ನೀವು ಒಬ್ಬಂಟಿಯಲ್ಲ, ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಡುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಹಿಂದುತ್ವದ ಫ್ಯಾಸಿಸಮ್ ವಿರುದ್ಧ ಒಂದು ಕೈಯಲ್ಲಿ ಓದು ಮತ್ತೊಂದು ಕೈಯಲ್ಲಿ ಹೋರಾಟ ನಡೆಯಲಿದೆ ಎಂದರು. ಇದನ್ನೂ ಓದಿ: ಯುವಕನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಮುಸ್ಲಿಂ ಯುವತಿ
Advertisement
ಸಿ.ಎಫ್.ಐ ಆಯೋಜಿಸಿದ ಗರ್ಲ್ಸ್ ಕಾನ್ಫರೆನ್ಸ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
Live Tv
[brid partner=56869869 player=32851 video=960834 autoplay=true]