ಬೆಂಗಳೂರು: ಹಿಜಬ್-ಕೇಸರಿ ಶಾಲು ಸಂಘರ್ಷದ ನಡುವೆ ಇಂದು ರಾಜ್ಯಾದ್ಯಂತ ಶಾಲೆ ಆರಂಭವಾಗಿದೆ. ಆದರೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಜಬ್ ಧರಿಸಿಯೇ ಮಕ್ಕಳು ಶಾಲೆಗೆ ಆಗಮಿಸಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ.
Advertisement
ಸಮವಸ್ತ್ರ ಧರಿಸಿಯೇ ಶಾಲೆಗೆ ಬರುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಬೆನ್ನಲ್ಲೆ ಸರ್ಕಾರ ಕೂಡ ಸೂಚನೆ ನೀಡಿತ್ತು. ಈ ಎಲ್ಲದರ ನಡುವೆಯೇ ಬೆಂಗಳೂರು, ಮೈಸೂರು, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿ ಶಾಲೆಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯರು ತಮ್ಮ ಜೊತೆಗೆ ಷೋಷಕರನ್ನು ಕೂಡ ಶಾಲೆಗೆ ಕರೆತಂದಿದ್ದಾರೆ. ಸರ್ಕಾದರ ಆದೇಶದಂತೆ ಶಾಲಾ ಸಿಬ್ಬಂದಿ ಹಿಜಬ್ ತೆಗೆಸಿ ಕ್ಲಾಸ್ ರೂಮ್‍ಗೆ ಕಳುಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಕಚೇರಿ ಮೇಲೆ ಕಲ್ಲೆಸೆದ ಯುವಕ
Advertisement
ಬೆಂಗಳೂರಿನ ಚಂದ್ರಾಲೇಔಟ್‍ನ ವಿದ್ಯಾಸಾಗರ ಶಾಲೆಯಲ್ಲಿ ಹಿಜಬ್ ವಿವಾದ ಇಂದಿನಿಂದ ಆರಂಭಗೊಂಡಿದೆ. ಶಾಲೆಗೆ ಹಿಜಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಈ ವೇಳೆ ಹಿಜಬ್ ಧರಿಸಿ ಕ್ಲಾಸ್ ರೂಮ್‌ಗೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ಶಾಲೆಯ ಅವರಣದೊಳಗೆ ಮಾತ್ರ ಅವಕಾಶ ಮಾಡಿಕೊಟ್ಟಿತು.
Advertisement
Advertisement
ವಿವಿಧ ಜಿಲ್ಲೆಗಳಲ್ಲಿ ಹಿಜಬ್ ಕಿರಿಕ್:
ಮೈಸೂರಿನಲ್ಲಿ ಹಿಜಬ್ ಸಂಘರ್ಷದ ನಡುವೆ ಶಾಲೆ ಗೋಡೆಗಳ ಮೇಲೆ ಸೇವ್ ರಿಪಬ್ಲಿಕ್ ಹೆಸರಿನ ಭಿತ್ತಿಪತ್ರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಟಿಸಿದೆ. ರ್ಯಾಲಿ ಯೂನಿಟಿ ಮಾರ್ಚ್‍ಗೆ ಕರೆ ನೀಡಿ ಭಿತ್ತಿಪತ್ರ ಶಾಲೆಯ ಗೋಡೆಗಳಲ್ಲಿ ಕಾಣುತ್ತಿದ್ದಂತೆ ಶಾಲಾ ಸಿಬ್ಬಂದಿ ಹರಿದು ಹಾಕಿದರು. ಕೆಲ ವಿದ್ಯಾರ್ಥಿಗಳು ಹಿಜಬ್ ಧರಿಸಿ ಶಾಲೆಗೆ ಆಗಮಿಸಿದರು. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ
ಬೆಳಗಾವಿಯಲ್ಲೂ ಹಿಜಬ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ನಗರದ ಸರ್ದಾರ್ ಸರ್ಕಾರಿ ಹೈಸ್ಕೂಲ್‍ಗೆ ಹಿಜಬ್ ಧರಿಸಿ ವಿದ್ಯಾರ್ಥಿಗಳು ಬಂದಿದ್ದಾರೆ. ಈ ವೇಳೆ ಹಿಜಬ್ ತೆಗೆದು ಒಳ ಬರುವಂತೆ ವಿದ್ಯಾರ್ಥಿನಿಯರಿಗೆ ಶಾಲಾ ಸಿಬ್ಬಂದಿ ಮನವಿ ಮಾಡಿದ್ದಾರೆ. ಈ ವೇಳೆ ಹಿಜಬ್ ತೆಗೆಯಲ್ಲಾ, ಬೇಕಾದ್ರೇ ಮಾಸ್ಕ್ ತೆಗೆಯುತ್ತೇವೆ ಎಂದ ವಿದ್ಯಾರ್ಥಿಗಳ ಜೊತೆ ಬಂದಿದ್ದ ಪೋಷಕರು ಪಟ್ಟು ಹಿಡಿದಿದ್ದಾರೆ. ಹಿಜಬ್ ವಿಚಾರದಲ್ಲಿ ಪೋಷಕರೊಬ್ಬರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಬಳಿಕ ಹಿಜಬ್ ಧರಿಸಿಯೇ ವಿದ್ಯಾರ್ಥಿನಿಯರು ಶಾಲೆಯ ಒಳ ಬಂದರು.
ಕೊಪ್ಪಳ ನಗರದ ಮೌಲಾನಾ ಆಜಾದ್ ಮಾಡೆಲ್ ಸ್ಕೂಲ್‍ನಲ್ಲಿ ಹಿಜಬ್ ಧರಿಸಿಯೇ ವಿದ್ಯಾರ್ಥಿನಿಯರು ಕ್ಲಾಸ್ ರೂಂ ಪ್ರವೇಶಿಸಿದರು. ಜಿಲ್ಲೆಯ ಗಂಗಾವತಿಯಲ್ಲಿ ಹಿಜಬ್ ಧರಿಸಿ ಬಂದ ಕೆಲ ವಿಧ್ಯಾರ್ಥಿಗಳು ಶಾಲಾ ಕಾಂಪೌಂಡ್ ಒಳಗಡೆ ಬರುತ್ತಲೇ ಸ್ವ ಇಚ್ಚೆಯಿಂದ ಹಿಜಬ್ ತಗೆದು ಒಳಬಂದರು.