ಪ್ಯಾರಿಸ್: ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಶಿರವಸ್ತ್ರ ಧರಿಸಿದರೆ (ಹಿಜಬ್) ದಂಡ ಹಾಕಲಾಗುವುದು ಎಂದು ಫ್ರೆಂಚ್ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಪ್ರತಿಜ್ಞೆ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಪೆನ್ ಈ ಹೇಳಿಕೆ ನೀಡಿದ್ದಾರೆ. ಮತ ಬೇಟೆಗಾಗಿ ಅಭ್ಯರ್ಥಿಗಳು ಕೊನೆ ಹಂತದ ಪ್ರಚಾರದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ
Advertisement
Advertisement
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆಯಿದ್ದರೂ, ಅಂತಿಮ ಹಂತದಲ್ಲಿ ಲೆ ಪೆನ್ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ. ಫ್ರಾನ್ಸ್‌ನ ಬಲ ಮತ್ತು ಎಡಪಂಥೀಯ ಪಕ್ಷಗಳು ಚುನಾವಣೆ ಸಮರವನ್ನು ಎದುರಿಸುತ್ತಿವೆ. ಎಡಪಂಥೀಯ ಅಭ್ಯರ್ಥಿ ಜೀನ್-ಲುಕ್ ಮೆಲೆನ್‌ಚೋನ್ ಮೂರನೇ ಸ್ಥಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ.
Advertisement
ಶಿರವಸ್ತ್ರ ಕುರಿತು ಆರ್‌ಟಿಎಲ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲೆ ಪೆನ್, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶಿರವಸ್ತ್ರವನ್ನು ನಿಷೇಧಿಸುವ ತನ್ನ ಪ್ರತಿಜ್ಞೆಯನ್ನು ಹೇಗೆ ಕಾರ್ಯಗತಗೊಳಿಸಲಾಗುವುದು ಎಂದು ವಿವರಿಸಿದ್ದಾರೆ. ಕಾರ್‌ಗಳಲ್ಲಿ ಸೀಟ್‌ಬೆಲ್ಟ್ ಧರಿಸುವ ರೀತಿಯಲ್ಲಿಯೇ, ಶಿರವಸ್ತ್ರ ಧರಿಸುವ ನಿಯಮವನ್ನು ಪೊಲೀಸರು ಜಾರಿಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ
Advertisement
ತಾರತಮ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಉಲ್ಲಂಘನೆಯ ಆಧಾರದ ಮೇಲೆ ತನ್ನ ಹಲವು ಪ್ರಸ್ತಾವಿತ ಕಾನೂನುಗಳಿಗೆ ಸಾಂವಿಧಾನಿಕ ಸವಾಲುಗಳನ್ನು ತಪ್ಪಿಸಲು ಜನಮತಗಣನೆಗಳನ್ನು ಬಳಸುವುದಾಗಿ ಲೆ ಪೆನ್ ಹೇಳಿದ್ದಾರೆ.
ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳು ಅಥವಾ ಸಾರ್ವಜನಿಕವಾಗಿ ಪೂರ್ತಿ ಮುಖವನ್ನು ಮುಚ್ಚಿಕೊಳ್ಳುವ ಹೊದಿಕೆಗಳನ್ನು ನಿಷೇಧಿಸುವ ಕ್ರಮಗಳನ್ನು ಫ್ರಾನ್ಸ್‌ನ ಹಿಂದಿನ ಶಾಸನಗಳಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ
ಕರ್ನಾಟಕ ರಾಜ್ಯದಲ್ಲಿ ಆರಂಭವಾದ ಹಿಜಬ್ ವಿವಾದ ಈಗ ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ. ಇದೇ ಹೊತ್ತಿನಲ್ಲಿ ಫ್ರಾನ್ಸ್‌ನಲ್ಲೂ ಚುನಾವಣೆಗೆ ಹಿಜಬ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸ್‌ನ ಎಡ ಹಾಗೂ ಬಲಪಂಥೀಯ ಪಕ್ಷಗಳು ಮತ ಬೇಟೆಗಾಗಿ ಹಿಜಬ್ ಅಸ್ತ್ರ ಪ್ರಯೋಗಿಸುತ್ತಿವೆ.