ಹಾಸನ: ಹಿಜಬ್ ವಿವಾದ ನ್ಯಾಯಾಲಯದಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆಯಂತೆ ಮಕ್ಕಳಿಗೆ ಶಿಕ್ಷಣ ಕೊಡುವುದು ಹಾಗೂ ಹೆಣ್ಣುಮಕ್ಕಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಹಾಸನದ ಸಂಸದ ಡಿಕೆ ಸುರೇಶ್ ಹೇಳಿದರು.
ಸಂವಿಧಾನವನ್ನು ಉಳಿಸಬೇಕಾಗಿರುವುದು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡಿರುವ ಎಲ್ಲಾ ಪ್ರತಿನಿಧಿಗಳ ಜವಾಬ್ದಾರಿ. ಹಿಜಬ್ ವಿಚಾರ ರಾಜಕೀಯ ಮಾಡುತ್ತಿರುವುದೇ ಬಿಜೆಪಿಯವರು. ಇದು ಪ್ರಾರಂಭವಾಗಿರುವುದು ಬಿಜೆಪಿ ಅಂಗ ಸಂಸ್ಥೆಗಳಿಂದ ಎಂದರು. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್
Advertisement
Advertisement
ಹಿಜಬ್-ಕೇಸರಿ ವಿವಾದ ಏಕಾಏಕಿ ಬಂದಿಲ್ಲ. ಕೇಸರಿ ವಿವಾದ ಸೃಷ್ಟಿ ಮಾಡಿರುವುದು ಸರ್ಕಾರವೇ ಹೊರತು ಬೇರೆ ಯಾರೂ ಅಲ್ಲ. ಫೆಬ್ರವರಿ 5ರ ವರೆಗೆ ಒಂದು ಆದೇಶವಿತ್ತು. ಬಳಿಕ ಆದೇಶ ಬದಲಾವಣೆಯಾಗಿದ್ದರಿಂದ ರಾಜ್ಯ-ರಾಷ್ಟ್ರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಈ ಗೊಂದಲವನ್ನು ಸರಿಪಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ
Advertisement
ಕೇಸರಿ ಧ್ವಜವನ್ನ ರಾಷ್ಟ್ರ ಧ್ವಜವನ್ನಾಗಿ ಮಾಡಿ ಕೆಂಪುಕೋಟೆ ಮೇಲೆ ಹಾರಿಸಬೇಕು ಎಂದು ಒಬ್ಬ ಹಿರಿಯ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರ ಮೇಲೆ ಕೇಸ್ ದಾಖಲಿಸಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕು. ಅದನ್ನು ಬಿಟ್ಟು ಬೇರೆ ಎಲ್ಲಾ ವಿಚಾರಗಳನ್ನು ಮಾತನಾಡುವುದು ಎಷ್ಟು ಸರಿ ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದಾರೆ.