ನವದೆಹಲಿ: ಮುಸ್ಲಿಂ ಯುವತಿಯರಿಗೆ ಹಿಜಬ್ ಧರಿಸಲು ಮುಸ್ಲಿಂ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಪ್ರೇರಣೆ ನೀಡುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಹೇಳಿದ್ದಾರೆ. ಈ ಮೂಲಕ ಹಿಜಬ್ ಗಲಬೆ ಹೊಸ ತಿರುವು ಪಡೆದುಕೊಂಡಿದೆ.
ಎನ್‌ಸಿಪಿಸಿಆರ್ ತಮ್ಮ ವೆಬ್‌ಸೈಟ್‌ನಲ್ಲಿ ಮಕ್ಕಳ ಹಕ್ಕನ್ನು ಉಲ್ಲಂಘಿಸುವ ಫತ್ವಾ ವಿಷಯನ್ನು ಉಲ್ಲೇಖಿಸಿದ್ದಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಕನುಂಗೋ ತಿಳಿಸಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು
Advertisement
Advertisement
ಹಿಜಬ್ ಅನುಮತಿಸದ ಶಾಲೆಗಳಿಂದ ಮುಸ್ಲಿಂ ಹುಡುಗಿಯರನ್ನು ಹೊರ ಹಾಕಬೇಕು ಹಾಗೂ ಪುರುಷ ಶಿಕ್ಷಕನಿದ್ದಲ್ಲಿ ನಿರ್ದಿಷ್ಟ ವಯಸ್ಸಿನ ಬಳಿಕ ಹುಡುಗಿಯರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಬಿಡಬಾರದು ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಹೀಗಾಗಿ ಹಿಜಬ್ ಪ್ರತಿಭಟನೆಯನ್ನು ದಾರುಲ್ ಉಲೂಮ್ ದಿಯೋಬಂದ್ ಆಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತದ ಎಂಜಿನಿಯರ್ ಕ್ಷೇತ್ರದ ವೈಶಿಷ್ಟ್ಯ – ಸಿದ್ಧವಾಗುತ್ತಿದೆ ಕೇಬಲ್ ರೈಲ್ವೇ ಸೇತುವೆ
Advertisement
ಎನ್‌ಸಿಪಿಸಿಆರ್ ಈ ಕುರಿತು ಜನವರಿ 15ರಂದು ನೋಟಿಸ್ ಕಳುಹಿಸಿದೆ ಹಾಗೂ ಅದರ ಉತ್ತರ ಈ ವಾರ ಬರಲಿದೆ ಎಂದು ತಿಳಿಸಿದ್ದಾರೆ.