ಉಡುಪಿ: ಹಿಜಬ್ ವರ್ಸಸ್ ಕೇಸರಿ ವಿವಾದಕ್ಕೆ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಈ ಆದೇಶ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ(ಸಿಎಫ್‍ಐ) ತೃಪ್ತಿ ನೀಡಿಲ್ಲ. ಸೋಮವಾರದ ನಂತರದ ತ್ರಿಸದಸ್ಯ ಪೀಠದ ವಿಚಾರಣೆ ಮೇಲೆ ಸಿಎಫ್‍ಐ ಕಣ್ಣಿಟ್ಟಿದೆ.
ನಾವು ಇದನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ನಾವು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಯಾವುದೇ ಒತ್ತಡ ಹಾಕಲ್ಲ. ಹಿಜಬ್ ಧರಿಸುವ ಬಗ್ಗೆ ಯಾವುದೇ ಸಲಹೆ ನೀಡಲ್ಲ. ಹಿಜಬ್ ತೆಗೆದು ಕಾಲೇಜಿಗೆ ಹೋಗುವ ವಿಚಾರ ಪೋಷಕರು ಹಾಗೂ ವಿದ್ಯಾರ್ಥಿನಿಯರ ಅಭಿಪ್ರಾಯಕ್ಕೆ ಬಿಟ್ಟಿದೆ ಎಂದು ಸಿಎಫ್‍ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲ್ ಕಟ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ
ಹಿಜಬ್ ವಿವಾದದ ಮಧ್ಯಂತರ ತೀರ್ಪಿಗೆ ಪಿಎಫ್‍ಐ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಕೋರ್ಟ್‍ನ ಆದೇಶ ಸಂಘಟನೆ ಸ್ವೀಕರಿಸಿದೆ. ಸೋಮವಾರ ನಂತರದ ವಿಚಾರಣೆ ಸಂದರ್ಭ ನಮ್ಮ ಪರವಾಗಿ ತೀರ್ಪುಗಳು ಬರಬಹುದು ಎಂಬ ನಂಬಿಕೆ ವ್ಯಕ್ತಪಡಿಸಿದೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಇದನ್ನು ಹೊರತಾಗಿ ಶನಿವಾರ ಅಥವಾ ಸೋಮವಾರದಿಂದ ಕಾಲೇಜಿಗೆ ತೆರಳುವುದು ವಿದ್ಯಾರ್ಥಿನಿಯರ ಇಚ್ಚೆಗೆ ಬಿಟ್ಟಿದ್ದು ಎಂದಿದೆ. ಇದನ್ನೂ ಓದಿ: ಹಿಜಬ್- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್ – ಹೈಕೋರ್ಟ್ ಕಲಾಪದ ಪೂರ್ಣ ಪಾಠ ಇಲ್ಲಿದೆ