ಹಾವೇರಿ: ರಾಜ್ಯದಲ್ಲಿ ಹಿಜಬ್ ಗೊಂದಲ ಮುಂದುವರೆದಿದೆ. ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದ 9 ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆದ ಘಟನೆ ಹಾವೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
Advertisement
ಹಿಜಬ್ ಧರಿಸಿಕೊಂಡು ಕಾಲೇಜು ಕೊಠಡಿಯೊಳಗೆ ವಿದ್ಯಾರ್ಥಿನಿಯರು ಪಾಠ ಕೇಳುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ಮಾಧ್ಯಮದವರ ಕ್ಯಾಮೆರಾ ಕಂಡು ಕೊಠಡಿಯಿಂದ ಹೊರಬಂದು ತಮ್ಮ ತಮ್ಮಲ್ಲೇ ಚರ್ಚೆ ಮಾಡಿಕೊಂಡು ಮನೆಗೆ ತೆರಳಿದರು. ಈ ಮೊದಲು ಶಾಲೆಗೆ ಪ್ರವೇಶಿಸುತ್ತಿದ್ದಂತೆ ಹಿಜಬ್ ತೆಗೆಯುವಂತೆ ಶಿಕ್ಷಕರು ಸೂಚಿಸಿದಾಗ ನಿರಾಕರಿಸಿದ ವಿದ್ಯಾರ್ಥಿನಿಯರು, ಹಿಜಬ್ ಧರಿಸಿ ಕೂರಲು ಅವಕಾಶ ಕೊಡದಿದ್ದರೆ ಮನೆಗೆ ತೆರಳುತ್ತೇವೆ ಎಂದು ಪಟ್ಟುಹಿಡಿದರು. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ
Advertisement
Advertisement
ಹಿಜಬ್ ಧರಿಸಿಕೊಂಡ ಬಂದ ವಿದ್ಯಾರ್ಥಿಗಳು ಪಾಠ ಕೇಳದೆ ಮನೆ ವಾಪಸ್ ತೆರಳಿದ ಬಳಿಕ ಯಾವುದೇ ಗದ್ದಲ ಗಲಾಟೆಯಾಗದೆ ಕಾಲೇಜಿನಲ್ಲಿ ಶಾಂತಿಯುತವಾಗಿ ಪಾಠಗಳು ನಡೆಯುತ್ತಿವೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳ ಮುಂದೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಗಲಾಟೆಗೆ ದಾರುಲ್ ಉಲೂಮ್ ದಿಯೋಬಂದ್ ಕಾರಣ: ಎನ್‌ಸಿಪಿಸಿಆರ್
Advertisement