ತೆಹ್ರಾನ್: ಕಟ್ಟರ್‌ವಾದಿ ಮುಸ್ಲಿಮ್ ದೇಶ ಇರಾನ್‍ನಲ್ಲಿ (Iran) ಇದೀಗ ಕ್ರಾಂತಿಯೊಂದು ನಡೆಯುತ್ತಿದೆ. ಮಹ್ಸಾ ಅಮಿನಿ (Mahsa Amini) ಲಾಕಪ್ ಡೆತ್ ನಂತರ ಹಿಜಬ್ (Hijab) ವಿರುದ್ಧ ಸಿಡಿದಿರುವ ಮಹಿಳಾ ಲೋಕ ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
Advertisement
ಸತತ ಆರನೇ ದಿನ ಇರಾನ್‍ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‍ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ. ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿ ಆಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರು ಸಹೋದರ, ಸಹೋದರಿಯರಂತೆ ಇದ್ದೇವೆ- ಬ್ರಿಟನ್‌ನಲ್ಲಿ ಒಗ್ಗಟ್ಟಿನ ಮಂತ್ರ
Advertisement
Look how the regime security Forces arrests protesters.#IranProtests2022 #MahsaAmini #مهسا_امینی pic.twitter.com/jhuQ3d1w8B
— Mr.Safaei (@Safaei91) September 21, 2022
Advertisement
ಇತ್ತ ಭಾರತದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಇವತ್ತು ಕೂಡ ಹಿಜಬ್ ವಿಚಾರಣೆ ನಡೀತು. ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರೆಲ್ ನಟರಾಜ್, ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ವರ್ಗೀಕರಿಸಲು ಅನುಮತಿಸಲಾಗುವುದಿಲ್ಲ. ಏಕತೆಯನ್ನು ಉತ್ತೇಜಿಸಲು ಹಿಜಬ್ ನಿಷೇಧಿಸಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಇದರ ವಿರುದ್ಧ ಯಾರೂ ದೂರು ನೀಡಲು ಸಾಧ್ಯವಿಲ್ಲ ಎಂದರು. ಬಳಿಕ ವಾದಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಹಿಜಬ್ ಕಡ್ಡಾಯ ಅಂತಾ ಕುರಾನ್ ಹೇಳಿಲ್ಲ. ಹಲವರು ಹಿಜಬ್ ಧರಿಸಲ್ಲ. ಹಿಜಬ್ ಧರಿಸುವುದು ಧಾರ್ಮಿಕ ವಿಚಾರವೇ ಆಗಿರಬಹುದು. ಆದ್ರೆ ಅದು ಧರ್ಮಕ್ಕೆ ಅತ್ಯಗತ್ಯವೇ? ಎಂದರೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದು ವಾದ ಮಂಡಿಸಿದ್ರು. ನಾಳೆಯೂ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್